ಬೆಂಗಳೂರು: ವಸಂತ ಪ್ರಕಾಶನ ವತಿಯಿಂದ ಡಾ. ವಸುಂಧರಾ ಭೂಪತಿ ಅವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ‘ಆರೋಗ್ಯ ಚಿಂತನ ಮಾಲಿಕೆ’ ಯ 4ನೇ ಕಂತಿನ 12 ಕೃತಿಗಳ ಲೋಕಾರ್ಪಣೆ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಅವರ ಅಭಿನಂದನಾ ಸಮಾರಂಭ ಏ. 13ರಂದು ಆಯೋಜಿಸಲಾಗಿದೆ.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಕೆ. ಮರುಳಸಿದ್ದಪ್ಪ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಲೇಖಕಿಯರಾದ ಡಾ. ವೀಣಾ ಭಟ್ ಮತ್ತು ಡಾ. ಎಚ್. ಜಿ. ಜಯಲಕ್ಷ್ಮಿ ಅವರು ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಲ್ಯುಮ್ನಿ ಅಸೋಸಿಯೇಷನ್ ಅಧ್ಯಕ್ಷೆ ಡಾ. ಆರ್.ಕೆ. ಸರೋಜಾ, ಹೃದ್ರೋಗ ತಜ್ಞ ಡಾ. ಸುರೇಶ ವಿ. ಸಗರದ, ಲೇಖಕಿ ಡಾ. ಕೆ.ಎಸ್. ಪವಿತ್ರ, ಪತ್ರಕರ್ತ ರವೀಂದ್ರ ಭಟ್ಟ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
Laxmi News 24×7