Breaking News

ಸಾಲು ಸಾಲು ಹಬ್ಬ; ಕೋಳಿ ಮಾಂಸ ದುಬಾರಿ

Spread the love

ಹೊಸಕೋಟೆ: ಮುನಿ ದ್ಯಾವರ, ಜಾತ್ರೆ, ಯುಗಾದಿಯ ಹೊಸ ತೊಡಕು, ನಂತರ ರಂಜಾನ್ ಹಬ್ಬಗಳು ಸಲುಸಾಲಾಗಿ ಬಂದಿರುವುದರಿಂದ ಕೋಳಿ ಮಾಂಸದ ಬೆಲೆ ದಿಢೀರನೆ ಏರಿಕೆಯಾಗಿದೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕ ಬಾಯ್ಲರ್ ಕೋಳಿ ಕೆ.ಜಿಗೆ ₹170 ಇದ್ದದ್ದು, ಏಕಾಏಕಿ ₹240 ಆಗಿದೆ.

ಅದೇ ರೀತಿಯಲ್ಲಿ ದೊಡ್ಡ ಬಾಯ್ಲರ್ ಕೋಳಿ ₹180ರಿಂದ ₹240ಕ್ಕೆ ಮುಟ್ಟಿದೆ. ಕೆಲವೆಡೆ ಹತ್ತಿಪ್ಪತ್ತು ರೂಪಾಯಿ ವ್ಯತ್ಯಾಸವೂ ಆಗಿದೆ. ಚಿಕ್ಕಬಾಯ್ಲರ್ ಮಾಂಸದ ಬೆಲೆ ₹70 ಹೆಚ್ಚಳವಾಗಿದ್ದರೆ, ದೊಡ್ಡ ಬಾಯ್ಲರ್ ಬೆಲೆ ₹60 ಹೆಚ್ಚಳವಾಗಿದೆ.

ಸಾಲು ಸಾಲು ಹಬ್ಬ; ಕೋಳಿ ಮಾಂಸ ದುಬಾರಿ

ನಾಟಿ ಕೋಳಿಗೆ ಕೆ.ಜಿಗೆ ₹700: ನಾಟಿ ಕೋಳಿಯ ಬೆಲೆ ಗಗನಕ್ಕೆ ಮುಟ್ಟಿದ್ದು, ₹300 ರಿಂದ ₹350 ಇದ್ದ ನಾಟಿ ಕೋಳಿಯ ಬೆಲೆ ಏಕಾಏಕಿ ₹550 ರಿಂದ ₹600 ಗಳಿಗೆ ಏರಿಕೆಯಾಗಿದೆ.

ಪಂದ್ಯದ ಹುಂಜದ ಬೆಲೆ ಸರಾಸರಿ ಕೆ.ಜಿಗೆ ₹700 ರಂತೆ ಮಾರಾಟವಾಗುತ್ತಿದೆ. ಸಜೀವ ಕೋಳಿಯ ಬೆಲೆ ₹700, ₹550 ರಿಂದ ₹600ಕ್ಕೆ ಮಾರಾಟ ಆಗುತ್ತಿದೆ.

ಬಾಯ್ಲರ್ ಕೋಳಿ ಮಾಂಸ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಜನ ನಾಟಿ ಕೋಳಿಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪಾರಂಗಳಲ್ಲಿ ನಾಟಿ ಕೋಳಿಗಳನ್ನು ಬಯಸದ ಜನರು ಹಳ್ಳಿಗಳ ಮನೆಗಳಲ್ಲಿ ಬೆಳೆದಿರುವ ನಾಟಿ ಕೋಳಿಗಳತ್ತ ಬೆನ್ನುಬಿದ್ದಿದ್ದು, ಬೆಲೆಗಳು ಗಗನಕ್ಕೆ ಏರಿಕೆಯಾಗಿವೆ.

ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ಯಾವುದೆ ವ್ಯತ್ಯಾಸವಿಲ್ಲ. ಪ್ರಸ್ತುತ ಕೆಜಿ ಮಟನ್‌ಗೆ ₹750 ರಿಂದ ₹800 ವರೆಗೆ ಮಾರಾಟವಾಗುತ್ತಿದೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ