Breaking News

ಕೇಸರಿ ಪಡೆಗೆ ಕ್ಯಾರೆ ಎನ್ನದ ಈಶ್ವರಪ್ಪ..ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ: ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ

Spread the love

ಶಿವಮೊಗ್ಗ: ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ (K. S. Eshwarappa) ಅವರು ಶಿವಮೊಗ್ಗ(Shivamogga)ದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶಿವಮೊಗ್ಗ ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘​ಧರ್ಮದ ಪರವಾಗಿರುವ ಈಶ್ವರಪ್ಪ ಗೆಲ್ತಾರೆ. ಶಿವಮೊಗ್ಗದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಬಿಎಸ್‌ವೈ ಕುಟುಂಬದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದರು.

 

ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಎಂಎಲ್‌ಎ ಅವನೇ ರಾಜ್ಯಾಧ್ಯಕ್ಷ, ಕರ್ನಾಟಕದಲ್ಲಿ ಇವರೇ ಬೆಳಯಬೇಕು. ಅಪ್ಪಿತಪ್ಪಿ ಬಿಜೆಪಿ ಅಥವಾ ಕಮಲಕ್ಕೆ ಮತ ಹಾಕಬಿಟ್ಟೀರಾ?, ಚಿಹ್ನೆ ಯಾವುದು ಎಂದು ಏಪ್ರೀಲ್ 19ಕ್ಕೆ ಗೊತ್ತಾಗುತ್ತದೆ. ಈ ಮೂಲಕ ಈಶ್ವರಪ್ಪನ ಗುರುತಿಗೆ ಮತ ಹಾಕುವಂತೆ ಕೋರಿದ್ದಾರೆ. ಶಿವಮೊಗ್ಗದಲ್ಲಿ ಯಾರು ಲಿಂಗಾಯತರು ಇಲ್ವಾ?, ಎಲ್ಲಾ ಲಿಂಗಾಯತರು ಹೇಳುತ್ತಿದ್ದಾರೆ ನನಗೆ ಮತಹಾಕುತ್ತಾರಂತೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ವೀಕ್ ಅಭ್ಯರ್ಥಿ ಹಾಕಿದ್ದಾರೆ. ನಾಲ್ಕು ಪಟ್ಟು ಹಣ ಖರ್ಚು ಮಾಡಿದ್ರು ವಿಜಯೇಂದ್ರ ಗೆದಿದ್ದು 10ಸಾವಿರ ಮತದಿಂದ, ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಹೊಂದಾಣಿಕೆಯಿಂದಲೇ ಗೆಲುವು ಕಂಡಿದ್ದಾರೆ. ಈ ಭಾರಿ ಅಪ್ಪ-ಮಕ್ಕಳನ್ನ ಸೋಲಿಸುವುದೇ ನನ್ನ ಗುರಿ ಎಂದಿ ಕಿಡಿಕಾರಿದರು.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ