Breaking News

ಅಣ್ಣ-ತಮ್ಮ ದುಡ್ಡು ಕೊಟ್ಟು ಕಾಲಿಗೆ ಬಿಳ್ತಿದ್ದಾರೆ : ಕುಮಾರಸ್ವಾಮಿ

Spread the love

ಬೆಂಗಳೂರು : ನಮ್ಮದು ಸ್ಟ್ರಾಟರ್ಜಿ ಏನಿಲ್ಲ. ಚುನಾವಣೆ ಗೆಲ್ಲಬೇಕು ಅಷ್ಟೆ. ಡಿಕೆಶಿ ನೋಟು ಡಾಕ್ಟ್ರಿಗೆ ವೋಟು ಅಷ್ಟೇ. ಡಿ.ಕೆ. ಶಿವಕುಮಾರ್‌ ಅವರ ನೋಟು ಪಡೆದು, ಡಾಕ್ಟರ್‌ಗೆ ಮತ ನೀಡಿ ಎಂದು ಮತದಾರರಿಗೆ ಮನವಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಕಿದರು.

 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಡಾ. ಮಂಜುನಾಥ್ ಅವರು ಒಂದು ವಿದ್ಯುತ್ ಸಂಚಲನ ಮಾಡಿದ್ದಾರೆ. ಜನರಲ್ಲೂ ಸಹ ಸ್ವಯಂ ಪ್ರೇರಣೆಯಿಂದ ಒಲವಿದೆ. ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಅಂತ ಜನರಲ್ಲಿ ಭಾವನೆ ಇದೆ ಎಂದು ಹೇಳಿದರು.

ಚನ್ನಪಟ್ಟಣ ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿ, ಅವರು ದುಡ್ಡಿನ ಕಡೆ ಹೋಗಿದ್ದಾರೆ ಅಷ್ಟೆ. ನಮ್ಮಿಂದ ಗೆದ್ದವರನ್ನ ಕೊಂಡ ತಕ್ಷಣ ಚುನಾವಣೆಯಲ್ಲಿ ಗೆಲ್ಲಬಹುದು ಅಂದಕೊಂಡಿದ್ದಾರೆ. ಒಬ್ಬೊಬ್ಬರಿಗೆ 15 ಲಕ್ಷ ಕೊಟ್ಟಿದ್ದಾರಂತೆ. ದುಡ್ಡಿನ ಮದ ಇಳಿಸೋದಕ್ಕೆನೇ ಡಾಕ್ಟ್ರರನ್ನ ಅಂಕುಶವಾಗಿ ಇಟ್ಟುಕೊಂಡಿದ್ದೇವೆ ಎಂದು ಡಿಕೆ ಬ್ರದರ್ಸ್​ಗೆ ಚಾಟಿ ಬೀಸಿದರು.

ಅಣ್ಣತಮ್ಮದುಡ್ಡುಕೊಟ್ಟುಕಾಲಿಗೆಬಿಳ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಗೂ ಡಾಕ್ಟ್ರರ ಹೆಸರು ಅಷ್ಟೆ. ಅವರು ದುಡ್ಡು ಕೊಟ್ಟು ನಾಯಕರನ್ನು ಕೊಂಡಿಕೊಂಡಿದ್ದಾರೆ. ಇಂಥ ದರಿದ್ರನಾ‌ ನೋಡಿರಲಿಲ್ಲ. 50 ವೋಟು ಇದೆ ಅಂದ್ರೆ, ದುಡ್ಡು ಕೊಟ್ಟು ಕಾಲಿಗೆ ಬಿಳ್ತಿದ್ದಾರೆ ಅಣ್ಣ ತಮ್ಮ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ?

Spread the love ಬೆಂಗಳೂರು: ಸಿಎಂ ಸಿದ್ದರಾಮಯ್ಯ ಈಗಾಗಲೇ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಈ ನಿಟ್ಟಿ‌ನಲ್ಲಿ ಚರ್ಚೆ ನಡೆಸಲು ನ.15ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ