ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ನಿನ್ನೆ ಕೊಡಗು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ಹಾಗೇ ಇದೇ ಸಮಯದಲ್ಲಿ ಮುಂದಿನ ಕೆಲವೇ ದಿನದಲ್ಲಿ ಮಳೆ ವಿಚಾರದಲ್ಲಿ ಭರ್ಜರಿ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆಹಾಗಾದ್ರೆ ಏನದು ಸಿಹಿಸುದ್ದಿ..? ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಭರ್ಜರಿ ಮಳೆ ಬೀಳಲಿದೆ? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.
ಅಂತೂ ಕರ್ನಾಟದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಈ ಮೂಲಕ ಜನರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ. ಸುಮಾರು ಒಂದೂವರೆ ತಿಂಗಳಿಂದ ಭಾರಿ ಬಿಸಿಲಿನ ಬೇಗೆಯಲ್ಲಿ ಬೆಂದು ಹೋಗಿರುವ ನಮ್ಮ ಕನ್ನಡ ನಾಡಿಗೆ ಮಳೆ ಒಂದಷ್ಟು ರಿಲೀಫ್ ನೀಡಿದೆ. ಹೀಗಿದ್ದಾಗ ಮತ್ತೊಂದು ಭರ್ಜರಿ ಸುದ್ದಿ ಕೂಡ ಸಿಕ್ಕಿದೆ. ಅದು ಅಂತಿಂತಹ ಸುದ್ದಿ ಅಲ್ಲ, ಇನ್ನೇನು ಇಡೀ ಕರ್ನಾಟಕವೇ ಮಳೆಯ ಖುಷಿಯಲ್ಲಿ ನೆನೆಯುವ ಖುಷಿ ಖುಷಿಯಾದ ಸುದ್ದಿ. ಹಾಗಾದ್ರೆ ಕರ್ನಾಟಕದಲ್ಲಿ ಭಾರಿ ಮಳೆ ಶುರುವಾಗುವುದು ಯಾವಾಗ? ಮುಂದೆ ಓದಿ
ಬಂತು.. ಬಂತು.. ಮಳೆ ಬಂತು!
ಮಳೆ ಬರದೇ ಇದ್ದರೆ ಏನಾಗುತ್ತೆ? ಅನ್ನೋದನ್ನ ಇಡೀ ಕನ್ನಡ ನಾಡಿನ ಜನತೆ ಈಗ ಪೂರ್ತಿ ಅನುಭವಿಸಿದ್ದಾರೆ. ಯಾಕಂದ್ರೆ ಕಳೆದ ವರ್ಷ ಅಂದ್ರೆ 2023ರಲ್ಲಿ ಕೂಡ ಮಳೆ ಇಲ್ಲದೆ ಜನ ಭಾರಿ ಸಮಸ್ಯೆ ಎದುರಿಸಿದ್ದರು. ಅದೇ ರೀತಿ ಈ ಬಾರಿ ಕೂಡ ಮಳೆ ಕೈಕೊಟ್ಟ ಕಾರಣಕ್ಕೆ, ಕನ್ನಡ ನಾಡು ನರಳಿ ಹೋಗಿದೆ. ಬಿಸಿಲಿನ ಧಗೆ ಹೇಗಿದೆ ಎಂದರೆ, ಮನೆಯ ಮೇಲೆ ಇಟ್ಟಿರುವ ನೀರಿನ ಟ್ಯಾಂಕರ್ ಕೂಡ ಬಿಸಿಯಾಗಿ ನೀರು ಕೊತ ಕೊತ ಕುದಿಯುತ್ತಿದೆ. ನಲ್ಲಿಯಲ್ಲಿ ಸೋಲಾರ್, ಅಥವಾ ಯಾವುದೇ ವ್ಯವಸ್ಥೆ ಇಲ್ಲದೆ ನೇರವಾಗಿ ಸೂರ್ಯನೇ ಬಿಸಿ ನೀರು ಕೊಡುತ್ತಿದ್ದಾನೆ. ಇಂತಹ ಪರಿಸ್ಥಿತಿ ನಿರ್ಮಾಣವಾದ ಸಮಯದಲ್ಲೇ ಭರ್ಜರಿ ಮಳೆ ಕರ್ನಾಟಕ ರಾಜ್ಯದಲ್ಲೀಗ ಶುರುವಾಗಿದೆ!
ಅಷ್ಟಕ್ಕೂ ಹವಾಮಾನ ಇಲಾಖೆ ಅಂದಾಜಿನ ಪ್ರಕಾರ ಕಳೆದ ತಿಂಗಳು, ಅಂದ್ರೆ ಮಾರ್ಚ್‌ನ ಆರಂಭದಲ್ಲೇ ಒಂದಷ್ಟು ಮಳೆ ಬರಬೇಕಿತ್ತು. ಆದರೆ ಹವಾಮಾನ ವೈಪರಿತ್ಯದ ಪರಿಣಾಮ ಕರ್ನಾಟಕಕ್ಕೆ ಬೀಳಬೇಕಿದ್ದ ಮಳೆ ಉತ್ತರ ಭಾರತಕ್ಕೆ ಹೋಗಿತ್ತು. ಇದೀಗ ಏಪ್ರಿಲ್ 12 ರಿಂದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಇದು ಕನ್ನಡಿಗರಿಗೆ ಭರ್ಜರಿ ಸುದ್ದಿ ಕೊಟ್ಟಂತಾಗಿದೆ.