ವಿಜಯಪುರ : ಕೊನೆಗೂ ಫಲಿಸಿತು ಕರುನಾಡಿನ ಪ್ರಾರ್ಥನೆ, ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದ್ದು, ಹೈದರಾಬಾದಿನ ಎಂದ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ.

ನಿನ್ನೆ ಗ್ರಾಮದ ಶಂಕರಪ್ಪ ಮುಜಗೊಂಡ ಎನ್ನುವವರ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್ ಸುಮಾರು 15ರಿಂದ 20 ಅಡಿ ಆಳದಲ್ಲಿ ಬಿದ್ದಿದ್ದ. ಬಳಿಕ ಕಾರ್ಯಾಪ್ರವೃತ್ತರಾ ಅಧಿಕಾರಿಗಳು ಎರಡು ಹಿಟಾಚಿ ಮೂರು ಜಿಸಿಬಿ ಗಳಿಂದ ಸಾತ್ವಿಕನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಲಾಗಿತ್ತು. ಅಲ್ಲದೆ ಎಸ್ ಡಿ ಆರ್ ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದೆ. ಅಲ್ಲದೆ ಇಂಡಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಸ್ಥಳದಲ್ಲಿ ಕಾರ್ಯಚರಣೆಯಲ್ಲಿ ನಿರತರಾಗಿದ್ದರು.
ಇನ್ನೂರಕ್ಷಣಾ ಕಾರ್ಯಚರಣೆ ವೇಳೆಯಲ್ಲಿ ಮಗುವಿನ ಶಬ್ದವನ್ನು ಕೇಳಿಸಿಕೊಂಡು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು, ಇದು ಮಗುವನ್ನು ಉಳಿಸುವುದಕ್ಕೆ ಎಲ್ಲರ ಮನಸ್ಸು ದಾಂಗುಡಿ ಇಡುತಿತ್ತು, ಇನ್ನೂ ಮಗುವನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎನ್ನಲಾಗಿದೆ. ಸದ್ಯ ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು ಅಂಥ ವೈದ್ಯರು ತಿಳಿಸಿದ್ದಾರೆ.
Laxmi News 24×7