ಹಾಸನ: ‘ಈವರೆಗೂ ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಯಾರು ಏನೇ ಕುತಂತ್ರ ಮಾಡಿದರೂ, ಏನೇ ಹೋರಾಟ ಮಾಡಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರುವುದು ಖಚಿತ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ತಾಲ್ಲೂಕಿನ ಕಟ್ಟಾಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಕಾವೇರಿ ನೀರಿಗಾಗಿ ಹೋರಾಡಿದ್ದೇನೆ.ಹೇಮಾವತಿ ನೀರನ್ನು ನಾವು ಬಳಸಬಾರದು ಎಂದು ಈಗ ಆದೇಶ ಮಾಡುತ್ತಾರೆ. ರಾಜ್ಯದಲ್ಲಿ ಅಧಿಕಾರದ ದರ್ಪ ಮಿತಿಮೀರಿದೆ. ಮೂರು ಸಲ ಬಂದು ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ 1991ರಲ್ಲಿ ಹೇಗೆ ನನ್ನನ್ನು ಗೆಲ್ಲಿಸಿದ್ದಿರೋ, ಅದೇ ರೀತಿ ಈಗ ಪ್ರಜ್ವಲ್ ಕೈ ಹಿಡಿಯಬೇಕು’ ಎಂದು ಮನವಿ ಮಾಡಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಕಟ್ಟಾಯ ಭಾಗದ ಜನರ ಅನುಕೂಲಕ್ಕೆ ಯಗಚಿ ಜಲಾಶಯ ನಿರ್ಮಿಸಿದೆ. ಆದರೆ 1999 ರಲ್ಲಿ ನನ್ನನ್ನು ಸೋಲಿಸಿದ ಜಿ. ಪುಟ್ಟಸ್ವಾಮಿ ಗೌಡರು, ಹಾಸನ ಜಿಲ್ಲೆಯ ಸುಮಾರು 45 ಸಾವಿರ ಎಕರೆ ಜಮೀನಿಗೆ ಅನುಕೂಲವಾಗಬೇಕಿದ್ದ ನೀರನ್ನು ಚಿಕ್ಕಮಗಳೂರಿಗೆ ಕೊಂಡೊಯ್ದರು. ಅದರಿಂದಾಗಿ ಈ ಭಾಗದ ಜನರಿಗೆ ಅನಾನುಕೂಲವಾಗಿದೆ’ ಎಂದರು.
Laxmi News 24×7