Breaking News

ಬರದ ನಾಡಲ್ಲೂ ಬಂಗಾರದಂತ‌ ಬೆಳೆ ಬೆಳೆದ ರೈತ; ಸಮಗ್ರ ಕೃಷಿ ಮೂಲಕ ಲಕ್ಷಾಂತರ ರೂ. ಲಾಭ

Spread the love

ಯಾದಗಿರಿ, ಮಾ.31: ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅದರಲ್ಲೂ ಮಳೆ ಇಲ್ಲದ್ದಕ್ಕೆ ರೈತರು(Farmer) ಬೆಳೆಯನ್ನ ಕಳೆದುಕೊಂಡು ಕಂಗಲಾಗಿ ಹೋಗಿದ್ದಾರೆ. ಅದರಲ್ಲೂ ಈಗ ಬೇಸಿಗೆ ಆರಂಭವಾಗಿದ್ದರಿಂದ ದಿನೆ ದಿನೆ ತಾಪಮಾನ ಕೂಡ ಹೆಚ್ಚಾಗ ತೊಡಗಿದೆ.

ಕೆರೆ ಕಟ್ಟೆಗಳು ಭತ್ತಿ‌ ಹೋಗುತ್ತಿದ್ದು,ಅಂತರ್ಜಲ ಮಟ್ಟಕುಸಿತದಿಂದ ಬೋರವೆಲ್​ಗಳು ಬಂದ್ ಆಗಿ ಹೋಗಿದೆ. ಆದ್ರೆ, ಇಂತಹ ಸಂಕಷ್ಟದ‌ ಸಮಯದಲ್ಲೂ ಜಿಲ್ಲೆಯ ಸುರಪುರ(Surapura) ತಾಲೂಕಿನ ಲಕ್ಷ್ಮಿಪುರ ಗ್ರಾಮದ ರೈತ ಶಿವರಾಜ್ ಭರ್ಜರಿಯಾಗಿ‌ ಬೆಳೆ ಬೆಳೆದಿದ್ದಾನೆ. ತನ್ನ ಒಂಬತ್ತು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ನಾನಾ ಬೆಳೆಗಳನ್ನ ಬೆಳೆದು ವರ್ಷಕ್ಕೆ ಲಕ್ಷ ಲಕ್ಷ ಲಾಭ ಪಡೆಯುತ್ತಿದ್ದಾನೆ.

ದ್ರಾಕ್ಷಿ

ಮೂರು ಎಕರೆಯಲ್ಲಿ ಕಳೆದ ವರ್ಷ ದ್ರಾಕ್ಷಿ ಬೆಳೆಯನ್ನ ಹಾಕಿದ ರೈತನಿಗೆ ಈಗ ಬೆಳೆ ಕೈಗೆ ಬಂದಿದೆ. ಚಿಕೋಟಾದಿಂದ ಸಸಿಗಳನ್ನ ತಂದು ಹಾಕಿದ ರೈತ ಸುಮಾರು 30 ಲಕ್ಷ ಖರ್ಚು ಮಾಡಿ ಬೆಳೆಯನ್ನ ಬೆಳೆದಿದ್ದಾನೆ. ಈ ವರ್ಷ ಆರಂಭದ ವರ್ಷವಾಗಿದ್ದರಿಂದ ಮೊದಲ ಬೆಳೆಯಿಂದ 6.5 ಲಕ್ಷ ಲಾಭ ಪಡೆದಿದ್ದಾನೆ. ಇನ್ನು ಹತ್ತು ವರ್ಷಗಳ ಕಾಲ ಬೆಳೆ ಬರಲಿದೆ. ಸದ್ಯ ಹಸಿ ದ್ರಾಕ್ಷಿ ಮಾರಾಟ ಮಾಡುತ್ತಿದ್ದರಿಂದ ಕಡಿಮೆ ಲಾಭ ಬಂದಿದೆ. ಆದ್ರೆ, ಇದೀಗ ತನ್ನ ಜಮೀನಿನಲ್ಲೇ ಒಣ ದ್ರಾಕ್ಷಿ ಮಾಡಲು ಪ್ಲ್ಯಾನ್ ಮಾಡಿದ್ದಾನೆ. ಹೀಗಾಗಿ ಮುಂದಿನ ವರ್ಷದಿಂದ ವರ್ಷಕ್ಕೆ 20 ಲಕ್ಷ ಲಾಭ ಬರುವ ನಿರೀಕ್ಷೆಯಲ್ಲಿದ್ದಾನೆ.


Spread the love

About Laxminews 24x7

Check Also

ಡ್ರಂಕ್​​ & ಡ್ರೈವ್:​ 36 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು

Spread the love ಬೆಂಗಳೂರು: ಮದ್ಯ ಸೇವಿಸಿ ಶಾಲಾ ವಾಹನಗಳನ್ನು ಓಡಿಸುವ​ ಚಾಲಕರ ವಿರುದ್ಧ ನಗರ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ