ಬೆಳಗಾವಿ: ಕೋವಿಡ್ 19ಗೆ ಸಂಬಂಧಿಸಿದಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ, ಕಾಲೇಜು ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಲಾಕ್ ಡೌನ್ ಅವಧಿಯನ್ನು ಕರ್ತವ್ಯ ನಿರತ ಎಂದು ಪರಿಗಣಿಸಿ ಗೌರವಧನ ನೀಡುವಂತೆ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿಎಂ ಯಡಿಯೂರಪ್ಪರವರಿಗೆ ಮನವಿ ಮಾಡಿದ್ದಾರೆ.
ಈ ಮನವಿ ಕುರಿತು ಸಿಎಂ ಯಡಿಯೂರಪ್ಪನವರು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಂಡು ಗೌರವಧನ ಬಿಡುಗಡೆಗೆ ಆದೇಶ ನೀಡಬೇಕೆಂದು ಅವರು ಕೋರಿಕೊಂಡಿದ್ದಾರೆ.
Laxmi News 24×7