ಮಂಗಳೂರು : ಇಫ್ತಾರ್ (iftar) ಕೂಟಕ್ಕಾಗಿ ಇಡೀ ರಸ್ತೆಯನ್ನೇ ಬಂದ್ ಮಾಡಿರುವ ಘಟನೆ ಮಂಗಳೂರಲ್ಲಿ(mangaluru) ನಡೆದಿದೆ.
ರಸ್ತೆ ತುಂಬೆಲ್ಲಾ ಚೇರ್ ಹಾಕಿ ಒಂದಿಡೀ ರಸ್ತೆಯನ್ನೇ ಬಂದ್ ಮಾಡಿ ಆಹಾರ ಸೇವನೆಗೆ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಮಂಗಳೂರಿನ ಮುಡಿಪು ಜಂಕ್ಷನ್‌ನಲ್ಲಿ (mudipu junction) ಈ ರೀತಿ ರಸ್ತೆ ಬ್ಲಾಕ್ ಮಾಡಿ ಇಫ್ತಾರ್ ಆಯೋಜಿಸಲಾಗಿದೆ.
ಇದರ ಪರಿಣಾಮ ಟೂ-ವೇ ಇದ್ದ ರಸ್ತೆ ಒನ್-ವೇ ಆಗಿದ್ದು, ವಾಹನಗಳೆಲ್ಲಾ ರಸ್ತೆಯ ಒಂದೇ ಬದಿಯಲ್ಲಿ ಸಂಚರಿಸುವಂತಾಗಿದೆ. ಈ ರೀತಿ ಇಫ್ತಾರ್ ಆಯೋಜನೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಇಂಥ ಕೂಟಗಳನ್ನು ರಸ್ತೆ ಬಿಟ್ಟು ಬೇರೆಡೆ ಆಯೋಜಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ
ಮುಸ್ಲಿಮರು ರಂಜಾನ್ ತಿಂಗಳ ಉಪವಾಸ ಮಾಡುತ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಅನ್ನಾಹಾರ ಸೇವಿಸಿದರೆ ಮತ್ತೆ ಸೂರ್ಯಾಸ್ತದ ನಂತರವೇ ಊಟ ಮಾಡುವುದು ಈ ರೋಜಾ ಉಪವಾಸದ ಪದ್ಧತಿ. ಇಫ್ತಾರ್ ಎಂದು ಕರೆಯಲ್ಪಡುವ ಭೋಜನವನ್ನು ಸೂರ್ಯಾಸ್ತದ ನಂತರ ಸೇವಿಸಿ ಉಪವಾಸ ಅಂತ್ಯಗೊಳಿಸುತ್ತಾರೆ
Laxmi News 24×7