Breaking News

ರೀಲ್‌ ಜೋಡಿ ರಿಯಲ್‌ ಮದುವೆ; “96” ಚಿತ್ರದ ನಟ,ನಟಿ ರಿಯಲ್‌ ಲೈಫ್​ನಲ್ಲೂ ಗಂಡ-ಹೆಂಡ್ತಿ

Spread the love

ಬೆಂಗಳೂರು: ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ 96 ಸಿನಿಮಾ 2018ರಲ್ಲಿ ಕಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಅದಾದ ಮೇಲೆ ಇದೇ ಸಿನಿಮಾ ಕನ್ನಡದಲ್ಲೂ 99 ಹೆಸರಿನಲ್ಲಿ ರಿಮೇಕ್‌ ಆಗಿತ್ತು. ಇದೇ 96 ಚಿತ್ರದ ಜೋಡಿ ರಿಯಲ್‌ ಆಗಿಯೇ ಮದುವೆಯಾಗಿದ್ದಾರಂತೆ.

 

ತಮಿಳಿನ 96 ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ ಈ ಚಿತ್ರಕ್ಕೆ ಸೌತ್ ಇಂಡಸ್ಟ್ರಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಂಗೀತದ ದೃಷ್ಟಿಯಿಂದಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ವಿಜಯ್ ಮತ್ತು ತ್ರಿಷಾ ಅವರ ಬಾಲ್ಯದ ಪಾತ್ರಗಳಲ್ಲಿ ಗೌರಿ ಜಿ ಕಿಶನ್ ಮತ್ತು ಆದಿತ್ಯ ಭಾಸ್ಕರ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ನಟನೆಯಿಂದ ಜನಮನ್ನಣೆ ಗಳಿಸಿದರು. ತ್ರಿಷಾ ಪಾತ್ರದಲ್ಲಿ ಗೌರಿ ಜಿ ಕಿಶನ್ ಕಾಣಿಸಿಕೊಂಡರೆ, ವಿಜಯ್ ಸೇತುಪತಿ ಪಾತ್ರದಲ್ಲಿ ಆದಿತ್ಯ ಭಾಸ್ಕರ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬರುವ ಜಾನು ಮತ್ತು ರಾಮ್ ಪಾತ್ರಗಳಿಗೆ ವಿಶೇಷ ಅಭಿಮಾನಿ ಬಳಗವಿದೆ.

 

ರೀಲ್‌ ಜೋಡಿ ರಿಯಲ್‌ ಮದುವೆ; "96" ಚಿತ್ರದ ನಟ,ನಟಿ ರಿಯಲ್‌ ಲೈಫ್​ನಲ್ಲೂ ಗಂಡ-ಹೆಂಡ್ತಿ

 

ಈ ಚಿತ್ರದ ನಂತರ ಗೌರಿಗೆ ಹೆಚ್ಚಿನ ಅವಕಾಶಗಳು ಬಂದವು. ಗೌರಿ ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಆದಿತ್ಯ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಜಿ ಕಿಶನ್ , ಆದಿತ್ಯ ಭಾಸ್ಕರ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗುತ್ತಿವೆ. ಮದುವೆಯ ಫೋಟೋಗಳನ್ನು ಹಂಚಿಕೊಂಡು ಅವರಿಗೆ ಶುಭ ಹಾರೈಸುತ್ತಿದ್ದಾರೆ.

ನಿಜವಾಗಿ ಈ ಜೋಡಿ ಮದುವೆಯಾಗಿಲ್ಲ. ಇದೀಗ ಸಖತ್ ಸದ್ದು ಮಾಡುತ್ತಿರುವ ಫೋಟೋಗಳು.. ಇವರಿಬ್ಬರು ಜತೆಯಾಗಿ ನಟಿಸಿದ ಹಾಟ್ ಸ್ಪಾಟ್ ಸಿನಿಮಾದ ಫೋಟೋಗಳು. ಈ ಚಿತ್ರ ಮಾರ್ಚ್ 29 ರಂದು ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾದ ಪ್ರಚಾರದ ಅಂಗವಾಗಿ ಸಿನಿಮಾದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡುತ್ತಿರುವ ಗೌರಿ, ‘ರಾಮ್ ಮತ್ತು ಜಾನು ಈ ವಿಶ್ವದಲ್ಲಿ ಒಂದಾಗಿದ್ದಾರೆ.. ಈಗ ಮತ್ತೆ ಒಂದಾಗಿದ್ದಾರೆ.. ಹಾಟ್ ಸ್ಪಾಟ್ ಬಿಡುಗಡೆಯಾಗಲಿದೆ. ಆದರೆ ಇದನ್ನು ನೋಡದ ಜನ.. ರಾಮ್ ಮತ್ತು ಜಾನು ಫೋಟೋಗಳನ್ನು ಶೇರ್ ಮಾಡಿ ರಿಯಲ್ ಲೈಫ್‌ನಲ್ಲಿ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.. ಇನ್ನು ಕೆಲವರು ಇದೊಂದು ಹಾಟ್ ಸ್ಪಾಟ್ ಸಿನಿಮಾ ಪ್ರಮೋಷನ್ ಅಷ್ಟೇ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ