Breaking News

ಬಾಯಿ ಆರೋಗ್ಯ ವಿವಿಧೆಡೆ ಜಾಗೃತಿ ಶಿಬಿರ

Spread the love

ಬೆಳಗಾವಿ: ಭಾರತೀಯ ದಂತ ವೈದ್ಯರ ಸಂಘದ ಬೆಳಗಾವಿ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಜಿಲ್ಲೆಯ ಐದು ಶಾಲೆಗಳಲ್ಲಿ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಗಾವಿ ತಾಲ್ಲೂಕು ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಸಂಘದ ಡಾ.ಅಶ್ವಿನಿ ಅಂಗಡಿ, ಸದಸ್ಯರಾದ ಡಾ.ಸುಧಾ ಕುಂಬಾರ, ಡಾ.ಅನುರಾಧ ಮತ್ತು ಡಾ.ಸುಶೀಲ್ ನಂದಗಾವಿ ಅವರು ಭಾಗವಹಿಸಿ, ಗರ್ಭಿಣಿಯರು ಮತ್ತು ಹದಿಹರೆಯದ ಬಾಲಕಿಯರಲ್ಲಿ ‘ಪೆರಿಯೊಡಾಂಟಲ್ ಕಾಯಿಲೆಗಳ ತಡೆಗಟ್ಟುವಿಕೆ’ ಕುರಿತು ಜಾಗೃತಿ ಮೂಡಿಸಿದರು.

ಬೆಳಗಾವಿ: ಬಾಯಿ ಆರೋಗ್ಯ ವಿವಿಧೆಡೆ ಜಾಗೃತಿ ಶಿಬಿರ

ಹುಕ್ಕೇರಿ ತಾಲ್ಲೂಕು ಆಸ್ಪತ್ರೆ ಸಹಯೋಗದೊಂದಿಗೆ ಅಂಗನವಾಡಿಯಲ್ಲೂ ದಂತ ಆರೋಗ್ಯ ಶಿಬಿರ ನಡೆಸಲಾಯಿತು. ಡಾ.ವಿನೋದ್‌ಕುಮಾರ್‌ ನೇತೃತ್ವ ವಹಿಸಿದ್ದರು. ಇನ್ನೊಂದೆಡೆ, ಬೈಲಹೊಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್‌-4ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಡಿಎ ಸದಸ್ಯೆ ಡಾ.ಅನಸೂಯಾ ಮೂಲಿಮನಿ 320 ಶಾಲಾ ಮಕ್ಕಳಿಗೆ ಬಾಯಿಯ ಆರೋಗ್ಯ ಜಾಗೃತಿ ಮತ್ತು ಮೌಖಿಕ ತಪಾಸಣೆ ನಡೆಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ