ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬದಲಾವಣೆಗೆ ಪಟ್ಟು ಹಿಡಿದಿರುವ ಅಸಮಾಧಾನಿತರ ಗುಂಪು ಬದಲಾವಣೆ ಮಾಡದಿದ್ದಲ್ಲಿ ಅಚ್ಚರಿ ಅಭ್ಯರ್ಥಿಯೊಬ್ಬರನ್ನ ಕಣಕ್ಕಿಳಿಸಲು ಸಹ ನಿರ್ಧರಿಸಿದ್ದಾರೆ.
ಗುರುವಾರ ಸಂಜೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರೆಡ್ಡಿ, ಎಸ್.ಎ.
ರವೀಂದ್ರನಾಥ್, ದಾವಣಗೆರೆ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗ ಲೇಬೇಕು. ಬದಲಾಗದಿದ್ದರೆ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನ ನಿಲ್ಲಿಸಿ ಗೆಲ್ಲಿಸುವುದರೊಂದಿಗೆ ಮುಂದೆ ಅವರನ್ನ ನರೇಂದ್ರ ಮೋದಿಗೆ ಅವರಿಗೆ ಒಪ್ಪಿಸುತ್ತೇವೆ ಎಂದರು.
Laxmi News 24×7