Breaking News

ತಾಳಿ ಕಟ್ಟುವ ಶುಭ ವೇಳೆ ಬಂದ ಪ್ರಿಯಕರ; ಮಾಂಗಲ್ಯವೇ ಕಿತ್ಕೊಂಡ

Spread the love

ಹಾಸನ: ತಾಳಿ ಕಟ್ಟುವ ಶುಭ ವೇಳೆ ವಧುವಿನ (Bride) ಪ್ರಿಯಕರ ಆಗಮಿಸಿ ಗಲಾಟೆ ಮಾಡಿದ್ದರಿಂದ ಮದುವೆಯೊಂದು (Marriage) ಮುರಿದು ಬಿದ್ದಿದೆ. ಹಾಸನ ಜಿಲ್ಲೆಯ ಬೇಲೂರು (Beluru, Hassan) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ರೇವತಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಮದುವೆ ಶಿವಮೊಗ್ಗ ಮೂಲದ ಪ್ರಮೋದ್‌ಕುಮಾರ್ ಎಂಬವರ ಜೊತೆ ನಿಗದಿಯಾಗಿತ್ತು.

ಇನ್ನೇನು ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಮದುವೆಗೆ ಅಡ್ಡಿಪಡಿಸಿದ್ದಾನೆ. ನವೀನ್ ಹಾಸನ ಹೊರವಲಯದ ಗವೇನಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ.

Hassan: ತಾಳಿ ಕಟ್ಟುವ ಶುಭ ವೇಳೆ ಬಂದ ಪ್ರಿಯಕರ; ಮಾಂಗಲ್ಯವೇ ಕಿತ್ಕೊಂಡು ಬಿಟ್ಟ, ಮುಂದೇನಾಯ್ತು?

ಯುವಕನನ್ನ ವಶಕ್ಕೆ ಪಡೆದ ಪೊಲೀಸರು

ಕಲ್ಯಾಣಮಂಟಪಕ್ಕೆ ಬಂದು ತಾಳಿ ಕಿತ್ತುಕೊಂಡು, ಯುವತಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ನವೀನ್ ಪಟ್ಟು ಹಿಡಿದಿದ್ದಾನೆ. ಇದರಿಂದ ಕಲ್ಯಾಣಮಂಟಪದಲ್ಲಿ ಕೆಲಕಾಲ‌ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಮಧ್ಯ ಪ್ರವೇಶಿಸಿದ ಬೇಲೂರು ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ