Breaking News

ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ ಸಂಯುಕ್ತ ಪಾಟೀಲ್ ಯಾರು ಅನ್ನೋದು ಯಾವ ಶಾಸಕನಿಗೂ ಗೊತ್ತಿಲ್ಲ: ಕಾಶಪ್ಪನವರ್

Spread the love

ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ, ಅವರು ತಮ್ಮನ್ನು ಕೂಡ ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು.

ದೆಹಲಿ:ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಕೆಂಡಾಮಂಡಲರಾಗಿದ್ದಾರೆ. ಅದುಕಾಂಗ್ರೆಸ್ ಶಾಸಕ ಸ್ವಾಭಾವಿಕವೂ ಹೌದು.

ಅವರ ಪತ್ನಿ ವೀಣಾ ಕಾಶಪ್ಪನವರ್ ಗೆ (Veena Kashappanavar) ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalkot Lok Sabha Seat) ಟಿಕೆಟ್ ತಪ್ಪಿರುವುದು ಹೆಚ್ಚುಕಡಿಮೆ ಖಚಿತವಾಗಿದೆ. ದೆಹಲಿಯಲ್ಲಿ ಸುದ್ದಿ ಗೊತ್ತಾದ ಬಳಿಕ ಮಾಧ್ಯಮದವರ ಜೊತೆ ಮಾತಾಡಿದ ಕಾಶಪ್ಪನವರ್ ಬೆಂಕಿಯುಗುಳಿದರು. ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ

, ಅವರು ತಮ್ಮನ್ನು ಕೂಡ ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು. ಆದರೆ ಇಲ್ಲಿಗೆ ಬಂದು ನೋಡಿದಾಗ ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ ಎಂದು ಹೇಳಿದರು.

ತಮ್ಮ ಕುಟುಂಬಕ್ಕೆ ಯಾಕೆ ಅನ್ಯಾಯ ಮಾಡಿದ್ದಾರೋ ಗೊತ್ತಿಲ್ಲ, ತಾನೊಬ್ಬ ಪಕ್ಷದ ಕಟ್ಟಾಳು ಮತ್ತು ಜವಾಬ್ದಾರಿಯುತ ಶಾಸಕನಾಗಿರುವುದರಿಂದ ಬಂಡೇಳುವ ಪ್ರಶ್ನೆ ಉದ್ಭವಿಸಲ್ಲ, ಅದರೆ ವಾಪಸ್ಸು ಹೋಗಿ ಕಾರ್ಯಕರ್ತರು, ಸಮುದಾಯದವರು ಮತ್ತು ಬಂಧು-ಮಿತ್ರರೊಂದಿಗೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ, ಚುನಾವಣೆಯನ್ನು ಅವರೇ ಮಾಡಿಕೊಳ್ಳಲಿ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ