ಬೆಳಗಾವಿ: ನಗರದ ಹಿಂಡಾಲ್ಕೋ ಫ್ಯಾಕ್ಟರಿಯ ಕಂಪೌಂಡ್ ಬಳಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಹುಲಿ ಓಡಾಟದ ದೃಶ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ.
ಕಲ್ಲೋಳಿಕರ, ಹುಲಿ ಪ್ರತ್ಯಕ್ಷ ಆಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ.
ಸುದ್ದಿಗೆ ಸ್ಪಂದಿಸಿದ ನಮ್ಮ ಸಿಬ್ಬಂದಿಗಳು ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಆದರೆ ತಪಾಸಣೆಯಲ್ಲಿ ಅಂತಹ ಯಾವುದೇ ಕುರುಹು ಇಲ್ಲಿಯವರೆಗೆ ದೊರೆತಿಲ್ಲ. ಇದು ಊಹಾಪೋಹ ಸುದ್ದಿ, ಜನರು ಆತಂಕ ಆತಂಕ ಪಡಬೇಕಿಲ್ಲ. ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.