ಕರಟಕ ದಮನಕ (Karataka Damanka) ಚಿತ್ರದ ಹಿತ್ಲಕ ಕರಿಬ್ಯಾಡ ಮಾವ ಹಾಡೂ ಹಿಟ್ ಆಗಿದೆ. ಸಿನಿಮಾ ಬರೋ ಮೊದ್ಲು, ಸಿನಿಮಾ ಬಂದ್ಮೇಲೆ ಹೀಗೆ ಎರಡೂ ಟೈಮ್‌ನಲ್ಲೂ ಈ ಹಾಡು ಹಿಟ್ (Song Hit) ಆಗಿ ವೈರಲ್ ಆಗಿದೆ. ಶಾಲೆಯ ಬಸ್‌ಗಳಲ್ಲೂ ಈ ಹಾಡು ಉತ್ತರ ಕರ್ನಾಟಕದಲ್ಲಿ ಕೇಳಿ ಬರುತ್ತದೆ.
ಟ್ರ್ಯಾಕ್ಟರ್‌ನಲ್ಲಿ ಇದು ಕಾಮನ್ ಅನ್ನೋಮಟ್ಟಿಗೆ ಹಿಟ್ ಆಗಿದೆ. ಆದರೆ ಈಗ ವಿಷಯ ಇಲ್ಲ ಬಿಡಿ. ಈ ಹಾಡನ್ನ ಹಾಡಿರೋ ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ (Malu Nipanal) ಬಗ್ಗೇನೆ ಹೊಸ ಮ್ಯಾಟರ್ ಹೊರ ಬಂದಿದೆ. ಗಾಯಕ ಮಾಳು ನಿಪನಾಳ ಇದೀಗ ಆಯಕ್ಟರ್ ಆಗಿದ್ದಾರೆ. ಮೊದಲ ಅವಕಾಶದಲ್ಲಿಯೇ ಒಂದು ಒಳ್ಳೆ ಪಾತ್ರ ಕೂಡ ಮಾಡುತ್ತಿದ್ದಾರೆ.
ಭಟ್ರ ಸಿನಿಮಾದಲ್ಲಿಯೇ ಮಾಳುಗೆ ಸಿಕ್ತು ಆಯಕ್ಟಿಂಗ್ ಚಾನ್ಸ್!
ಬಣ್ಣ ಹಚ್ಚಿದ ಜಾನಪದ ಗಾಯಕ ಮಾಳು ನಿಪನಾಳ
ಗಾಯಕ ಬಾಳು ನಿಪನಾಳ ಸ್ಪೆಷಲ್ ಆಗಿಯೇ ಇದ್ದಾರೆ. ಹಾಡಿನ ಶೈಲಿ ಜಾನಪದ ರೀತಿಯಲ್ಲಿಯೇ ಇದೆ. ಆದರೆ ಹಾಡಿರೋ ಸಾಲುಗಳು ಮಾತ್ರ ಜಾಣರ ಪದಗಳೇ ಆಗಿವೆ. ಇವುಗಳನ್ನ ಹಾಡ್ತಾನೇ ಐದು ಸಾವಿರಕ್ಕೂ ಹೆಚ್ಚು ಗೀತೆಗಳನ್ನ ಹಾಡಿ ಆಗಿದೆ. ಆದರೆ ಇದೀಗ ಗಾಯಕ ಮಾಳು ನಿಪನಾಳ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಮಾಳು ನಿಪನಾಳ ಗಾಯನವನ್ನ ಗುರುತು ಹಿಡಿದವ್ರು ಬೇರೆ ಯಾರಲ್ಲ. ಉತ್ತರ ಕರ್ನಾಟಕ ಮೂಲದ ಡೈರೆಕ್ಟರ್ ಯೋಗರಾಜ್ ಭಟ್ರು. ಇವ್ರು ತಮ್ಮ ಕರಟಕ ದಮನಕ ಚಿತ್ರಕ್ಕೆ ಹಿತ್ಲಕ ಕರಿಬ್ಯಾಡ ಮಾವ ಹಾಡನ್ನ ಈ ಮಾಳು ನಿಪನಾಳ ಕಡೆಯಿಂದಲೇ ಹಾಡಿಸಿದ್ರು. ಅದು ಈಗ ಫುಲ್ ಹಿಟ್ ಆಗಿದೆ.