Breaking News

ಏ.1ರಿಂದ ದುಬಾರಿಯಾಗಲಿವೆ ಔಷಧಗಳು

Spread the love

ಬೆಂಗಳೂರು,- ಏಪ್ರಿಲ್ 1ರಿಂದ ಔಷಧಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಪೈನ್ಕಿಲ್ಲರ್, ಆಯಂಟಿ ಇನೆಕ್ಷನ್ ಸೇರಿದಂತೆ ಸುಮಾರು 800 ಪ್ರಮುಖ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ. ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಬದಲಾವಣೆಯ ನಂತರ ರಾಷ್ಟ್ರೀಯ ಅಗತ್ಯ ಪಟ್ಟಿಯಲ್ಲಿ ಔಷಧಿಗಳ ಬೆಲೆಯಲ್ಲಿ ಶೇ.0.0055ರಷ್ಟು ಹೆಚ್ಚಳವನ್ನು ಸರ್ಕಾರ ಅನುಮೋದಿಸಲಿದೆ.

 

ಹಣದುಬ್ಬರದ ಪರಿಣಾಮವಾಗಿ ಔಷಧ ಕಂಪನಿಗಳು ಬೆಲೆ ಏರಿಕೆ ಮಾಡುವಂತೆ ಕೆಲ ದಿನಗಳಿಂದ ಬೇಡಿಕೆ ಇಟ್ಟಿದ್ದವು. 2022ರಲ್ಲಿ ಔಷಧಗಳ ಬೆಲೆಯನ್ನು ಶೇ.10ರಿಂದ 12ರವರೆಗೆ ಹೆಚ್ಚಿಸಲಾಯಿತು. ಔಷಧ ತಯಾರಿಕೆಗೆ ಬಳಸುವ ಪದಾರ್ಥಗಳ ಬೆಲೆ ಶೇ.15ರಿಂದ 130ರಷ್ಟು ಏರಿಕೆಯಾಗಿದೆ ಎಂದು ಉದ್ಯಮಿ ಮತ್ತು ಔಷಧಿ ತಜ್ಞರು ಹೇಳಿದ್ದಾರೆ.

ಸಾವಿರಕ್ಕೂ ಹೆಚ್ಚು ಔಷಧಿ ತಯಾರಿಕರ ನೇತೃತ್ವದ ಗುಂಪು ಬೆಲೆ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿತ್ತು.ಈ ಹಿನ್ನೆಲೆಯಲ್ಲಿ ಇದೀಗ ಔಷಧಿಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಹೆಚ್ಚಿನ ಜನರಿಗೆ ಉಪಯುಕ್ತವಾಗುವ ಔಷಧಿಗಳನ್ನು ಸೇರಿಸಲಾಗಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ