Breaking News

ಟಿಕೆಟ್‍ಗಾಗಿ ಸಿಎಂ ಮನೆಗೆ ವೀಣಾ ಬೆಂಬಲಿಗರ ಮುತ್ತಿಗೆ

Spread the love

ಬೆಂಗಳೂರು, ಮಾ.18- ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ನುಗ್ಗುವ ಪ್ರಯತ್ನ ನಡೆಸಿದರು. ಬಾಗಲಕೋಟೆಯಿಂದ ಆಗಮಿಸಿದ ಮಹಿಳೆಯರ ತಂಡ ಇಂದು ಬೆಂಗಳೂರಿನಲ್ಲಿ ಹಿರಿಯ ನಾಯಕರನ್ನು ಭೇಟಿ ಮಾಡಲು ಯತ್ನಿಸಿತ್ತು.

 

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಬಳಿ ಬಿಗಿ ಕಾವಲು ಆಯೋಜಿಸಲಾಗಿದ್ದು, ಸಾಮಾನ್ಯ ಕಾರ್ಯಕರ್ತರನ್ನು ಒಳಗೆ ಬಿಡಲು ಪೊಲೀಸರು ಹಿಂದೆಮುಂದೆ ನೋಡುತ್ತಾರೆ. ಈ ಹಂತದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲೇಬೇಕು ಎಂದು ಹಠಕ್ಕೆ ಬಿದ್ದ ಮಹಿಳೆಯರು ಒಳ ಹೋಗಲು ಯತ್ನಿಸಿದರು. ಪೊಲೀಸರು ಅವರ ಮನವೋಲಿಸಿ ವಾಪಾಸ್ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾಗಿನಿಂದಲೂ ವೀಣಾ ಕಾಶಪ್ಪನವರು ಜನಸಾಮಾನ್ಯರ ಹಾಗೂ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬದಲು ಮುಖ ಪರಿಚಯ ಇಲ್ಲದವರನ್ನು ಕಣಕ್ಕಿಳಿಸಿದರೆ ನಾವು ಮತದಾನ ಮಾಡದೇ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಕಾಲುಜಾರಿ ನಾಲೆಗೆ ಬಿದ್ದ ಬಾಲಕಿ, ರಕ್ಷಣೆಗೆ ಹೋದ ನಾಲ್ವರು ಸೇರಿ ಐವರು ಮಕ್ಕಳು ನೀರುಪಾಲು

Spread the loveಮಂಡ್ಯ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿಯ ರಕ್ಷಣೆಗೆ ಮುಂದಾಗಿ, ಐವರು ಮಕ್ಕಳು ನೀರುಪಾಲಾದ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ