ಬೆಂಗಳೂರು: ಆಜಾನ್ ಸಮಯದಲ್ಲಿ ಹನುಮಂತನ ಭಕ್ತಿಗೀತೆ ಹಾಕಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರಿಂದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಘಟನೆಯ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಸುಲೇಮಾನ್, ಶಾನವಾಜ್, ರೋಹಿತ್, ದ್ಯಾನೀಶ್ ಮತ್ತು ತರುಣ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮುಖೇಶ್ ಹಲ್ಲೆಗೊಳಗಾಗಿರುವ ಯುವಕ. ವರ್ಧಮಾನ್ ಟೆಲಿಕಾಮ್’ ಎಂಬ ಮೊಬೈಲ್ ಅಂಗಡಿ ನಡೆಸುತ್ತಿದ್ದ ಮುಖೇಶ್. ಸಂಜೆ ಸಮಯ ಮೊಬೈಲ್ ಶಾಪ್‌ನಲ್ಲಿ ಹನುಮಂತನ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದ ಯುವಕ. ಈ ಸಮಯದಲ್ಲಿ ಅಂಗಡಿಗೆ ಬಂದಿದ್ದ ಮುಸ್ಲಿಂ ಸಮುದಾಯ ಯುವಕರು. ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯ ಅಂತಾ ಜಗಳ ತೆಗೆದಿದ್ದಾರೆ. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯಿಂದ ಹೊರ ಎಳೆದು ಮುಖೇಶ್ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ. ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೋಗಿದ್ದಾರೆ.
Laxmi News 24×7