ಹೊಸದಿಲ್ಲಿ: ರಾಷ್ಟ್ರಪತಿ ಭವನ ಎಸ್ಟೇಟ್‌ನಲ್ಲಿ ತಮ್ಮ ಹೆಸರಿನಲ್ಲಿ ನಿರ್ಮಿಸಲಾದ ರಸ್ತೆಯನ್ನು ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ತಾವೇ ಖುದ್ದಾಗಿ ಲೋಕಾರ್ಪಣೆಗೊಳಿಸಿದ್ದಾರೆ.
ತಮ್ಮ ನೇತೃತ್ವದ ಸಮಿ ತಿಯ “ಒಂದು ದೇಶ, ಒಂದು ಚುನಾವಣೆ’ ವರದಿ ಯನ್ನು ರಾಷ್ಟ್ರಪತಿಗೆ ಹಸ್ತಾಂತರಿಸಲು ಕೋವಿಂದ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
“ಅನಿರೀಕ್ಷಿತವಾದ ಈ ಘಟನೆ ನನ್ನ ಪಾಲಿನ ವಿಧಿ ಆಗಿದ್ದಿರಬಹುದು. ಅಚ್ಚರಿಯ ಅವಕಾಶವನ್ನು ನೀಡಿದ ರಾಷ್ಟ್ರಪತಿ ಭವನಕ್ಕೆ ಕೃತಜ್ಞ’ ಎಂದು ಅವರು ಟ್ವೀಟ್ ಮಾಡಿದ್ದಾರೆ.