ಬೆಳಗಾವಿ : ಬೈಲಹೊಂಗಲ ಮಾಜಿ ಶಾಸಕ ಹಾಗೂ ಯಡಿಯೂರಪ್ಪ ಆಪ್ತ ವಿಶ್ವನಾಥ ಪಾಟೀಲ್ ಇಂದು ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ವಿಶ್ವನಾಥ ಪಾಟೀಲ ಬಿಜೆಪಿ ಸೇರಿದರು.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಗದೀಶ್ ಮೆಟಗುಡ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕೌಜಲಗಿ ಗೆಲುವು ಸಾಧಿಸಿದ್ದರು.
ಸಧ್ಯ ವಿಶ್ವನಾಥ ಪಾಟೀಲ್ ಬಿಜೆಪಿ ಸೇರ್ಪಡೆ ಹಿಂದೆ ಹಲವು ಲೆಕ್ಕಾಚಾರ ಅಡಗಿದ್ದು ಇನ್ನೂ ಬೆಳಗಾವಿ ಲೋಕಸಭಾ ಟಿಕೆಟ್ ಘೋಷಣೆ ಆಗದ ಕಾರಣ, ವಿಶ್ವನಾಥ ಪಾಟೀಲ್ ಅಭ್ಯರ್ಥಿ ಆಗುತ್ತಾರಾ ಎಂಬ ಮಾತು ಜೋರಾಗಿವೆ.