ಬೆಂಗಳೂರು: ವ್ಯಕ್ತಿಯನ್ನು ಬಂಧಿಸಿ ಹಣಕ್ಕೆ (Money) ಬೇಡಿಕೆ ಇಟ್ಟಿದ್ದ ಕೆಆರ್ ಪುರ ಪೋಲಿಸರು (KR Pura Police) ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ.
ಕೆಆರ್ ಪುರ ಠಾಣಾ ಇನ್ಸ್‌ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್ ರಮ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು.
ಶ್ರೀರಾಮ್ ಎನ್ನುವವರನ್ನು 420 ಕೇಸ್‌ನಲ್ಲಿ ಬಂಧಿಸಿದ್ದ ರಮ್ಯಾ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ರಾತ್ರೋ ರಾತ್ರಿ 50 ಸಾವಿರ ರೂ. ಪಡೆದು ಶ್ರೀರಾಮ್‌ನನ್ನು ಬಿಟ್ಟು ಕಳುಹಿಸಿದ್ದರು.
ಅದಾದ ಬಳಿಕ ಮತ್ತೆ 4.5 ಲಕ್ಷ ನೀಡುವಂತೆ ವಕೀಲ ವೆಂಕಟಚಾಲಪತಿ ಎಂಬುವವರಿಗೆ ಪೋಲಿಸರು ಪೀಡಿಸಿದ್ದಾರೆ. ಇದರಿಂದ ಬೇಸತ್ತ ವಕೀಲ ವೆಂಕಟಚಾಲಪತಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಘಟನೆ ಹಿನ್ನಲೆಯಲ್ಲಿ ಹಣ ಪಡೆಯುವಾಗಲೇ ರಮ್ಯಾ ಹಾಗೂ ವಜ್ರಮುನಿ ಇಬ್ಬರು ಪೊಲೀಸರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.