ಭಾರತದಲ್ಲಿ ವಾಹನಗಳನ್ನು ಖರೀದಿಸಿದಾಗ, ಮೊದಲು ದೇವಾಲಯಕ್ಕೆ ಹೋಗುತ್ತಾರೆ. ವಾಹನಕ್ಕೆ ಪೂಜೆ ನೆರವೇರಿಸದ ಬಳಿಕವಷ್ಟೆ ಕುಟುಂಬವೆಲ್ಲ ಓಡಾಡುತ್ತಾರೆ. ಇದು ಹಿಂದೂ ಸಾಂಪ್ರದಾಯವಾಗಿದ್ದು, ಬಹುಕೋಟಿ ಐಷಾರಾಮಿ ಬೆಂಟ್ಲೆ ಎಸ್‌ಯುವಿ ಖರೀದಿಸಿದ ಮಾಲೀಕರೊಬ್ಬರು ಪೂಜೆ ನೆರವೇರಿಸಿ ಇದೀಗ ವೈರಲ್ ಆಗಿದ್ದಾರೆ.
ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬೆಂಟ್ಲಿ ಬೆಂಟೈಗಾ ಎಸ್‌ಯುವಿಯನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು, ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ಇದರ ಬೆಲೆಯು ರೂ. 5 ಕೋಟಿಯಿಂದ ಪ್ರಾರಂಭವಾಗಿ ರೂ. 7 ಕೋಟಿಗಳವರೆಗೆ ಇದೆ. ಇಷ್ಟು ದುಬಾರಿ ಕಾರಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿರುವ ಮಾಲೀಕರಿಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಟ್ಲೆ ಬೆಂಟೈಗಾ ಪೂಜೆಯ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಪೋಸ್ಟ್‌ನ ಶೀರ್ಷಿಕೆಯಲ್ಲಿ, “ವಿಲಕ್ಷಣ ಕಾರು ಡೆಲಿವರಿ ಪಡೆದ ನಂತರ ಸಾಂಪ್ರದಾಯಿಕ ಭಾರತೀಯ ಪೂಜೆಯನ್ನು ಸ್ವೀಕರಿಸುತ್ತಿರುವುದನ್ನು ನೋಡುವುದು ತುಂಬಾ ಒಳ್ಳೆಯದು!” ಎಂದು ಬರೆಯಲಾಗಿದೆ. ಈ ಸಣ್ಣ ವಿಡಿಯೋದಲ್ಲಿ, ಇಬ್ಬರು ಪೂಜಾರಿಗಳು ವಾಹನಕ್ಕೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದು.
ತಿಳಿಯದವರಿಗೆ: ಹಿಂದೂ ಸಂಪ್ರದಾಯದಲ್ಲಿ ಹೊಸ ವಾಹನಗಳಿಗೆ ಪೂಜೆ ಮಾಡುವುದು ಮೊದಲಿನಿಂದಲೂ ರೂಢಿಯಲ್ಲಿದೆ. ವಾಹನದ ಮೇಲೆ ಅರಿಶಿನ- ಕುಂಕುಮ ಇಟ್ಟು, ಹೂವುಗಳು, ತೆಂಗಿನಕಾಯಿ ಅರ್ಪಿಸಿ ದೇವರಿಗೆ ಕೈಮುಗಿಯಲಾಗುತ್ತದೆ. ವಾಹನ ಮತ್ತು ಅದರ ಪ್ರಯಾಣಿಕರಿಗೆ ದೇವರು ರಕ್ಷಣೆ ನೀಡುತ್ತಾರೆ ಎಂಬುದು ನಂಬಿಕೆಯಾಗಿದೆ. ಸುರಕ್ಷಿತ ಪ್ರಯಾಣ ಮತ್ತು ವಾಹನ ಧೀರ್ಘ ಕಾಲ ತಮ್ಮೊಂದಿಗೆ ಇರಲು ಈ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಬೆಂಟ್ಲೆ ಬೆಂಟೈಗಾ ವಿಶೇಷತೆಗಳು: ಬೆಂಟ್ಲೆ ಬ್ರಿಟಿಷ್ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಈ ಎಸ್‌ಯುವಿಯು ಮರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎಸ್ 600 ಮತ್ತು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಎಸ್‌ಯುವಿಯನ್ನು ಲಾಂಗ್ ವ್ಹೀಲ್ ಬೇಸ್ ಮತ್ತು ಶಾರ್ಟ್ ವ್ಹೀಲ್ ಬೇಸ್ ಮಾದರಿಗಳು ಸೇರಿದಂತೆ ಅನೇಕ ರೂಪಾಂತರಗಳಲ್ಲಿ ನೀಡಲಾಗುತ್ತದೆ.
ಈ ನಿರ್ದಿಷ್ಟ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಸ್‌ಯುವಿ ಶಾರ್ಟ್ ವ್ಹೀಲ್ ಬೇಸ್ ಮಾದರಿ ಎಂದು ತೋರುತ್ತಿದೆ. ಇದು 4.0 ಲೀ. ವಿ8 ಎಂಜಿನ್ ಹೊಂದಿದೆ. ಇದು 542 ಬಿಹೆಚ್‌ಪಿ ಪವರ್ ಹಾಗೂ 770 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಬೆಂಟ್ಲೆಯಿಂದ ಬಂದ ಮೊದಲ ಎಸ್‌ಯುವಿಯಾಗಿದೆ.