Breaking News

ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಕಲಿಸೋಣ: ಹಂಚಲಿ

Spread the love

ಅಡಹಳ್ಳಿ: ಒಂದಿಷ್ಟು ದೇಶಗಳು ಹಣ ಬಲ, ಶಸ್ತ್ರ ಬಲ ಮತ್ತು ಭಯೋತ್ಪಾದನೆಯಿಂದ ಜಗತ್ತನ್ನಾಳಲು ಹೊರಟರೆ, ಆಧ್ಯಾತ್ಮಿಕ ಬಲದಿಂದ ಭಾರತ ವಿಶ್ವವನ್ನೇ ಗೆಲ್ಲಲು ಹೊರಟಿದೆ ಎಂದು ತಾಳಿಕೋಟಿಯ ವಾಗ್ಮಿ ಅಶೋಕ ಹಂಚಲಿ ಹೇಳಿದರು.

ಅವರು ಸಮೀಪದ ನದಿ ಇಂಗಳಗಾಂವ ಗ್ರಾಮದಲ್ಲಿ 63ನೇ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ, ಮಹಾಂತ ಅಪ್ಪಗಳ ತೃತೀಯ ಪುಣ್ಯಸ್ಮರಣೋತ್ಸವ ಹಾಗೂ ಶರಣ ದಂಪತಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಕೃತಿ ಉಳಿವು ಕುರಿತು ಉಪನ್ಯಾಸ ನೀಡಿ, ನನ್ನ ದೇಶ, ನನ್ನ ನಾಡು ಎನ್ನದ ಹೃದಯ ಸುಡುಗಾಡು.

ಶರಣ ಸಂಸ್ಕೃತಿ ಉತ್ಸವ ; ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿ ಕಲಿಸೋಣ: ಹಂಚಲಿ

ಮಕ್ಕಳಿಗೆ ಸತ್ಯ, ಆಚಾರ, ವಿಚಾರ ಹಾಗೂ ಬಸವಾದಿ ಶಿವಶರಣರ ವಚನಗಳನ್ನು ಕಲಿಸೋಣ. ಶರಣ ಸಂಸ್ಕೃತಿ, ಋಷಿ ಸಂಸ್ಕೃತಿ ಅದುವೇ ನಮ್ಮ ಕೃಷಿ ಸಂಸ್ಕೃತಿಯಾಗಿದೆ.

ಜಾಗತೀಕರಣದ ದಳ್ಳುರಿಯೊಳಗೆ ನಮ್ಮ ಸಂಸ್ಕೃತಿ ಕೊಚ್ಚಿ ಹೋಗಿದೆ. ಮಕ್ಕಳಿಗೆ ಕಾರು, ಬಂಗಲೆ ಕಟ್ಟಿಸಿಕೊಡುವ ಬದಲು ಸಂಸ್ಕಾರ ಕೊಟ್ಟು ಬಿಡಿ, ಪುಣ್ಯ ಬರುತ್ತದೆ ಎಂದರು.

ನದಿ ಇಂಗಳಗಾಂವ ಗುರುಲಿಂಗದೇವರಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ. ಸಹಸ್ರ ಮುತ್ತೈದೆಯರ ಉಡಿ ತುಂಬುವ ಮೂಲಕ ಶಾಂತಿ, ನೆಮ್ಮದಿ, ಸಮೃದ್ಧಿ ಸ್ಥಾಪಿತವಾಗಿ ಈ ನಾಡು ಕಂಗೊಳಿಸಲು ನಾವೆಲ್ಲರೂ ಸಂಸ್ಕೃತಿಯನ್ನು ಆರಾಧಿಸೋಣ ಎಂದರು.


Spread the love

About Laxminews 24x7

Check Also

ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದಲ್ಲಿ ಶಿಸ್ತುಕ್ರಮ :ಈಶ್ವರ ಖಂಡ್ರೆ

Spread the loveಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ