Breaking News

ಇನ್ನು ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ರಾಯಚೂರಿನತ್ತ ಹೊರಟ್ಟಿದ್ದ ಜಗದೀಶ್ ಶೆಟ್ಟರ್​ ಕಾರು ವಾಪಸ್ ಹುಬ್ಬಳ್ಳಿಯತ್ತ ತಿರುಗಿದೆ.

Spread the love

ಹುಬ್ಬಳ್ಳಿ, (ಮಾರ್ಚ್ 13): ಲೋಕಸಭಾ ಚುನಾವಣೆಗೆ (Loksabha Elections 2024) ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕ ಒಟ್ಟು 8 ಹಾಲಿ ಬಿಜೆಪಿ(BJP) ಸಂಸದರಿಗೆ ಟಿಕೆಟ್​ ಮಿಸ್ ಆಗಿದೆ. ಇನ್ನು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ (jagadish shettar) ಅವರ ಕಾರು ವಾಪಸ್ ಹುಬ್ಬಳ್ಳಿ ಕಡೆ ತಿರುಗಿದೆ. ಹೌದು.. ಜಗದೀಶ್ ಶೆಟ್ಟರ್ ಬೆಳಗಾವಿ(Belagavi) ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ, 2ನೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಕಂಡು ಶೆಟ್ಟರ್ ರಾಯಚೂರು(Raichur) ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಹುಬ್ಬಳ್ಳಿಗೆ(Hubballi) ಬಂದಿದ್ದಾರೆ.

ಅಭ್ಯರ್ಥಿ ಸಂಪರ್ಕ ಅಭಿಯಾನ,ಗೋಡೆ ಬರಹಕ್ಕೆ ಚಾಲನೆ ನೀಡಲ ರಾಯಚೂರಿಗೆ ಹೋಗಬೇಕಿತ್ತು. ಮೊದಲೇ ರಾಯಚೂರು ಪ್ರವಾಸ ನಿಗದಿಯಾಗಿತ್ತು. ಅಲ್ಲದೇ ರಾಯಚೂರಿನಲ್ಲಿ ಸುದ್ದಿಗೋಷ್ಠಿಗೂ ಸಮಯ ನಿಗದಿಪಡಿಸಿದ್ದರು. ಆದ್ರೆ, ಯಾವಾಗ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ತಿಳಿಯಿತೋ ಕೂಡಲೇ ರಾಯಚೂರು ಪ್ರವಾಸ ರದ್ದುಗೊಳಿಸಿ ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಹುಬ್ಬಳ್ಳಿಗೆ ವಾಪಸ್ ಆಗಿದ್ದಾರೆ.

 

 


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ