ಬೆಂಗಳೂರು, ಮಾರ್ಚ್ 14: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕೇಸರಿ ಪಡೆ ಈಗಾಗಲೇ ಗೆಲ್ಲುವ ಕುದುರೆಯನ್ನ ಕಣಕ್ಕಿಳಿಸಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ ಹೈಕಮಾಂಡ್ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಹಲವು ಜಾತಿ ಲೆಕ್ಕಾಚಾರದಿಂದ ಬಿಜೆಪಿ ಟಿಕೆಟ್ ಘೋಷಿಸಿದೆ.ಬಿಜೆಪಿ ಲೋಕಸಭೆ ಟಿಕೆಟ್ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತರು ನಿರ್ಣಾಯಕರಾಗಿರುವ ಕಾರಣ ಬಿಜೆಪಿಯ ಪ್ರಕಟಿತ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದವರಿಗೆ ಸಿಂಹಪಾಲು ಸಿಕ್ಕಿದ್ದು, ಒಕ್ಕಲಿಗರಲ್ಲಿ ಇಬ್ಬರಿಗೆ ಸ್ಥಾನ ಸಿಕ್ಕಿದ್ರೆ, ಇತ್ತ ರಾಜ್ಯದಲ್ಲಿ ಹೆಚ್ಚು ಪ್ರಾಬಲ್ಯವಿರುವ ಕುರುಬ ಸಮುದಾಯವನ್ನ ಬಿಜೆಪಿ ಹೈಕಮಾಂಡ್ ಕಡೆಗಣಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕುರುಬ ಸಮುದಾಯದಿಂದ ಯಾರಿಗೂ ಬಿಜೆಪಿ ಮಣೆ ಹಾಕಿಲ್ಲ, ಇನ್ನು ಉಳಿದ 8 ಕ್ಷೇತ್ರಗಳಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳು ಸಿಗಲಿದೆ. ಉಳಿಯುವ ಐದು ಕ್ಷೇತ್ರದಲ್ಲಿ ಯಾವುದೇ ಕ್ಷೇತ್ರದಿಂದಲೂ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ.
ಜಾತಿವಾರು ಯಾರಿಗೆ ಎಷ್ಟು ಟಿಕೆಟ್?ಲಿಂಗಾಯತ – 08ಒಕ್ಕಲಿಗ – 02ಬ್ರಾಹ್ಮಣ – 02ಪರಿಶಿಷ್ಟ ಜಾತಿ – 03ಪರಿಶಿಷ್ಟ ಪಂಗಡ – 01ಬಂಟ – 01ಬಿಲ್ಲವ – 01ಬಲಿಜ – 01ಕ್ಷತ್ರಿಯ – 01ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್!ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆಬಾಗಲಕೋಟೆ -ಪಿ.ಸಿ.ಗದ್ದಿಗೌಡರ್ಉಡುಪಿ-ಚಿಕ್ಕಮಗಳೂರು -ಕೋಟ ಶ್ರೀನಿವಾಸ ಪೂಜಾರಿಹಾವೇರಿ -ಬಸವರಾಜ ಬೊಮ್ಮಾಯಿಮೈಸೂರು -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಬೆಂಗಳೂರು ಗ್ರಾಮಾಂತರ -ಡಾ.ಸಿ.ಎನ್.ಮಂಜುನಾಥಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್ತುಮಕೂರು -ವಿ.ಸೋಮಣ್ಣದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟಾಚಾಮರಾಜನಗರ -ಎಸ್.ಬಾಲರಾಜುಧಾರವಾಡ -ಪ್ರಹ್ಲಾದ್ ಜೋಶಿಕೊಪ್ಪಳ -ಡಾ.ಬಸವರಾಜ ತ್ಯಾವಟೂರುದಾವಣಗೆರೆ -ಗಾಯತ್ರಿ ಸಿದ್ದೇಶ್ವರ್ಬಳ್ಳಾರಿ -ಬಿ.ಶ್ರೀರಾಮುಲುಕಲಬುರಗಿ -ಡಾ.ಉಮೇಶ್ ಜಾಧವ್ಬೀದರ್ -ಭಗವಂತ ಖೂಬಾವಿಜಯಪುರ -ರಮೇಶ್ ಜಿಗಜಿಣಗಿಶಿವಮೊಗ್ಗ -ಬಿ.ವೈ.ರಾಘವೇಂದ್ರ