ಏರ್‌ಪೋರ್ಟ್‌ನಲ್ಲಿ ಪ್ರಿಯತಮೆಗೆ ಬಾಯ್ ಹೇಳಲು ಹೋಗಿ ಲವರ್ ಲಾಕ್!
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗುತ್ತಿದ್ದ ಗರ್ಲ್ ಫ್ರೆಂಡ್‍ಗೆ ಬಾಯ್ ಹೇಳಲು ಹೋಗಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ಏರ್‌ಪೋರ್ಟ್ ಪೊಲೀಸರ ಅತಿಥಿಯಾಗಿದ್ದಾನೆ.
ಆಕಾಶ್ ಏರ್ಲೈನ್‍ಗೆ (Akasa Airline) ಹೋಗುತ್ತಿದ್ದ ಗೆಳತಿಗೆ ಬಾಯ್ ಹೇಳಿ ಬರಲು ಟರ್ಮಿನಲ್ ಒಳಗಡೆ ಎಂಟ್ರಿಯಾಗಿ ಬಾಯ್ ಹೇಳಿ ಹೊರ ಬರುವಾಗ ಭದ್ರತಾ ಸಿಬ್ಬಂದಿ ಕೈಗೆ ಪ್ರಿಯತಮ ಸಿಕ್ಕಿಬಿದ್ದಿದ್ದಾನೆ.
ಪ್ರಿಯತಮ ಪ್ರಕಾರ್ ಶ್ರೀವತ್ಸವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೆಳತಿಗೆ ಡ್ರಾಪ್ ಮಾಡಲು ಹೋಗಿದ್ದಾನೆ. ಟರ್ಮಿನಲ್ ಒಳಗೆ ಹೋಗಿ ಬಾಯ್ ಮಾಡಿ ಬರುವುದಕ್ಕೆ ಪ್ಲಾನ್ ಮಾಡಿ ಗೆಳತಿ ಮಾಡಿಸಿದ್ದ ಟಿಕೆಟ್ ತನ್ನ ಮೊಬೈಲ್‍ನಲ್ಲಿ ಎಡಿಟ್ ಮಾಡಿದ್ದ.
ಭದ್ರತಾ ಸಿಬ್ಬಂದಿ ಕಣ್ಣಿಗೆ ಮಣ್ಣೆರಚಿ ಒಳಗಡೆ ಹೋಗಿ ಬಾಯ್ ಮಾಡಿ ಮರಳಿ ಹೊರಗಡೆ ಬರುವಾಗ ಟಿಕೆಟ್ ಪರಿಶೀಲನೆ ವೇಳೆ ಶ್ರೀವತ್ಸವ್ ಬಳಿ ಇದ್ದ ಟಿಕೆಟ್ ನಕಲಿ ಅನ್ನೋದು ಗೊತ್ತಾಗಿದೆ.
Laxmi News 24×7