ಬೆಂಗಳೂರು: ರಾಜ್ಯದಲ್ಲಿ ಫೇಕ್ ನ್ಯೂಸ್ ಹಾವಳಿ ತಪ್ಪಿಸೋದಕ್ಕೆ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳೋದಕ್ಕೆ ಮುಂದಾಗಿದೆ. ಈ ಸಂಬಂಧ ಶೀಘ್ರವೇ ಆದೇಶ ಕೂಡ ಪ್ರಕಟವಾಗಲಿದೆ.
ಈ ಕುರಿತಂತೆ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.
ಈ ಸಭೆಯ ಬಳಿಕ ಮಾತನಾಡಿದಂತ ಅವರು ರಾಜ್ಯದಲ್ಲಿ ಫೇಕ್ ನ್ಯೂಸ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಫೇಕ್ ನ್ಯೂಸ್ ಪತ್ತೆ ಹಚ್ಚುವುದು ಹೇಗೆ.? ಫೇಕ್ ನ್ಯೂಸ್ ಬಗ್ಗೆ ತನಿಖೆ ನಡೆಸುವವರು ಯಾರು? ನಿಯಂತ್ರಣ ಕ್ರಮಗಳು ಏನು.? ಕಾನೂನು ಕ್ರಮಗಳನ್ನು ಹೇಗೆಲ್ಲ ಜಾರಿಗೊಳಿಸಬೇಕು ಎನ್ನುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.
ಇಂದಿನ ಸಭೆಯಲ್ಲಿ ನಡೆಸಿದಂತ ಚರ್ಚೆಗಳನ್ನು ಮಂಗಳವಾರ ಅಥವಾ ಬುಧವಾರದಂದು ಫೇಕ್ ನ್ಯೂಸ್ ತಡೆಗಟ್ಟುವ ಸಂಬಂಧ ಆದೇಶ ಹೊರಡಿಸಲಾಗುತ್ತದೆ. ರಾಜ್ಯದಲ್ಲಿ ಫೇಕ್ ನ್ಯೂಸ್ ಹಾವಳಿಯನ್ನು ತಡೆಗಟ್ಟೋದಕ್ಕೆ ನಿಯಂತ್ರಣ ಕ್ರಮಗಳನ್ನು ಈ ಮೂಲಕ ಜಾರಿಗೊಳಿಸೋದಕ್ಕೆ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದರು.
Laxmi News 24×7