Breaking News

ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಸಿಎಂ ಆಗ್ತೀನಿ – ಯತ್ನಾಳ್ ಕಿಡಿ

Spread the love

ಯಾದಗಿರಿ:-ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಬರ್ತೀನಿ, ನಾನೇ ಸಿಎಂ ಆಗ್ತಿನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಾಂಬ್‌ ಸಿಡಿಸಿದ್ದಾರೆ.

ಕರ್ನಾಟಕದಲ್ಲಿ ವಿಜಯೇಂದ್ರನನ್ನು ನೋಡಿ ವೋಟ್‌ ಹಾಕೋದಿಲ್ಲ. ಏಕೆಂದರೆ ಇದು ಮೋದಿ ಚುನಾವಣೆ, ವಿಜಯೇಂದ್ರನನ್ನ ತೆಗೆದುಕೊಂಡು ಏನು ಮಾಡೋದು.

ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಆಗಿರಲಿ, ಸುಡುಗಾಡಾದ್ರೂ ಆಗಿರಲಿ. ರಾಜ್ಯದಲ್ಲಿ ಈ ಸಲ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತೆ. ಇದಕ್ಕೆ ವಿಜಯೇಂದ್ರ ಸಂಬಂಧಪಡಲ್ಲ ಎಂದು ಕಿಡಿ ಕಾರಿದ್ದಾರೆ

 

ಮುಂದುವರಿದು, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಯಾವಾಗ ಬಿಜೆಪಿಗೆ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ ಹೇಳಿ? ಯಡಿಯೂರಪ್ಪ ಅವರದ್ದು ಅಷ್ಟು ತೂಕ ಇದ್ದಿದ್ದರೆ, 130 ಸ್ಥಾನ ಬರಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.

 

ಮುಂದಿನ ಸಲ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗ್ತೀನಿ ಅಂತಾ ಕೆಲವರು ಈಗಲೇ ಬಿಳಿ ಅಂಗಿ ಹೊಲಿಸಿಕೊಂಡು ಕಾಯ್ತಿದ್ದಾರೆ. ಅವರೆಲ್ಲ ಹೊಂದಾಣಿಕೆ ಮಾಡಿಕೊಳ್ಳೋರು.

ಅವರ ಮಗನ್ನ ಇವರು ಗೆಲ್ಲಿಸೋದು, ಇವರ ಮಗನ್ನ ಅವರು ಗೆಲ್ಲಿಸೋಕೆ ಹೆಣಗಾಡ್ತಿದ್ದಾರೆ. ನಾನು ಬಂದ ಮೇಲೆ ಅದೆಲ್ಲ ನಡೆಯೋದಿಲ್ಲ. ಸದನದಲ್ಲೇ ಡಿಕೆ ಶಿವಕುಮಾರ್‌ಗೆ ಹೋಗೋ ಅದೆಲ್ಲ ನಡೆಯಲ್ಲ ಅಂತಾ ಹೇಳಿದ್ದೀನಿ ಎಂದು ಗುಡುಗಿದ್ದಾರೆ.


Spread the love

About Laxminews 24x7

Check Also

ರಾಜ್ಯದಾದ್ಯಂತ ರಸ್ತೆ ತಡೆಗೆ ಕರೆ ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ

Spread the loveಡಿಸೆಂಬರ್ 12: ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ