ಬೆಂಗಳೂರು, ಮಾ.10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆ ಬೇಕಾಬಿಟ್ಟಿ ಬೋರ್ ವೆಲ್(Bore Well) ಕೊರೆಯುವವರಿಗೆ ಜಲಮಂಡಳಿ ಶಾಕ್ ನೀಡಿದ್ದು, ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿದೆ.
ಒಂದು ವೇಳೆ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಜೊತೆಗೆ ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ವೆಲ್ ಹಾಕಬೇಕು.
ಅದಕ್ಕೋಸ್ಕರ ಜಲಮಂಡಳಿಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದೆ. ಅರ್ಜಿ ಸಲ್ಲಿಕೆ ಬಳಿಕ ಅನುಮತಿ ಸಿಕ್ಕರಷ್ಟೇ ಬೋರ್ ವೆಲ್ ಕೊರೆಸಬೇಕು. ಈ ನಿಯಮ ಮಾರ್ಚ್ 15 ರಿಂದ ಜಾರಿಯಾಗಲಿದೆ ಎಂದು ಆದೇಶಿಸಲಾಗಿದೆ.

Laxmi News 24×7