ಬಾಲಿವುಡ್ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಯಾವ ಜಾಗಕ್ಕೆ ಯಾವಾಗ ಬರುತ್ತಾರೆ ಅನ್ನೋದು ಪಾಪರಾಜಿಗಳಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ ಅನ್ನೋದು ಅನೇಕರ ಪ್ರಶ್ನೆ. ‘ಅವರು ಕಾದು ಕೂರುತ್ತಾರೆ. ಹೀಗಾಗಿ, ಸೆಲೆಬ್ರಿಟಿಗಳು ಸಿಗುತ್ತಾರೆ’ ಎಂದು ಕೆಲವರು ಹೇಳುತ್ತಾರೆ. ಆದರೆ, ಅಸಲಿಯತ್ತು ಹಾಗಿಲ್ಲ. ಇದೆಲ್ಲ ಪ್ರಚಾರದ ತಂತ್ರ. ಸೆಲೆಬ್ರಿಟಿಗಳು ತಮ್ಮ ಪ್ರಮೋಷನ್ಗೆ ಏನೆಲ್ಲ ಮಾಡುತ್ತಾರೆ ಎಂಬುದನ್ನು ನಟಿ ಯಾವುದೇ ಅಂಜಿಕೆ ಇಲ್ಲದೆ ಬಿಚ್ಚಿಟ್ಟಿದ್ದಾರೆ.
ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೂ ಅವರ ಮಾರ್ಕೆಟ್ ಹಾಗೆಯೇ ಇರಬೇಕು ಎಂದರೆ ಪ್ರಚಲಿತದಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ಈ ರೀತಿ ಪಾಪರಾಜಿಗಳಿಗೆ ಆಮಂತ್ರಣ ನೀಡೋದು ಸೆಲೆಬ್ರಿಟಿಗಳ ಪಿಆರ್ ತಂಡದವರು. ಈ ವಿಚಾರವನ್ನು ಪ್ರಿಯಾಮಣಿ ಹೇಳಿದ್ದಾರೆ.
‘ಜವಾನ್ ಸಿನಿಮಾ ಬಳಿಕ ಎಲ್ಲರೂ ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಏಕೆ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ಒಬ್ಬರು ಹೇಳಿದರು ಅವರನ್ನು ನೀವು ಕರೆಯಬೇಕು. ಅವರಿಗೆ ಹಣ ನೀಡಬೇಕು. ಈ ವಿಚಾರ ನನಗೆ ಗೊತ್ತಿರಲಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಪಾಪರಾಜಿಗಳನ್ನು ಅವರೇ ಫೋನ್ ಮಾಡಿ ಕರೆಯುತ್ತಾರೆ. ನನಗೆ ಒಂದು ಲಿಸ್ಟ್ ಕೂಡ ಬಂದಿತ್ತು. ಅದರಲ್ಲಿ ಯಾವ ಪಾಪರಾಜಿ ಎಷ್ಟು ಹಣ ಪಡೆಯುತ್ತಾರೆ ಅನ್ನೋದು ಕೂಡ ಇತ್ತು’ ಎಂದಿದ್ದಾರೆ ಪ್ರಿಯಾಮಣಿ.