ಘಟನೆ ನೋಡಿದ ಇನ್ನಿತರೆ ವಾಹನ ಸವಾರರು ಅಪಘಾತ ಮಾಡಿ, ಮರಿ ಕೋತಿಯ ಸಾವಿಗೆ ಮತ್ತು ತಾಯಿ ಕೋತಿ ಗಾಯಗೊಳ್ಳುವಂತೆ ಮಾಡಿದ ಕಾರು ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಪಘಾತವಾದ ಬಳಿಕ ಕಾರು ನಿಲ್ಲಿಸಿ ಕೋತಿಯನ್ನ ಆರೈಕೆ ಮಾಡುವ ಕೆಲಸ ಮಾಡಬೇಕಿತ್ತು.
ಮೃತಪಟ್ಟಿದ್ದರೆ ಅಂತ್ಯಸಂಸ್ಕಾರ ಆದ್ರೂ ಮಾಡುವ ಕೆಲಸ ಮಾಡಬೇಕಿತ್ತು ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ ಮಂಗನಿಗೆ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಮರಿ ಮಂಗ ಸಾವಿಗೀಡಾಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇದ ಕಂಡ ದಾರಿಹೋಕರ ಕರುಳು ಹಿಂಡುವಂತಾಗಿದೆ. ಅಪಘಾತ ಮಾಡಿದ (Road Accident) ಕಾರು ಚಾಲಕ ಎಸ್ಕೇಪ್ ಆಗಿಬಿಟ್ಟಿದ್ದಾನೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನೂ? ಸ್ಥಳೀಯರು (Localites) ಮತ್ತಿತರ ವಾಹನ ಸವಾರರಿಂದ ದೊಡ್ಡ ಮಂಗನ ರಕ್ಷಣೆ ಮಾಡಿ, ಮರಿ ಮಗನ (Baby Monkey) ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
Laxmi News 24×7