Breaking News
Home / ರಾಜಕೀಯ / ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆ ಸಮಾರಂಭಕ್ಕೆ ಇದೇ ಮಾರ್ಚ್ 6 ರಂದು ಆಗಮಿಸಲಿದ್ದಾರೆ:C.M.

ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆ ಸಮಾರಂಭಕ್ಕೆ ಇದೇ ಮಾರ್ಚ್ 6 ರಂದು ಆಗಮಿಸಲಿದ್ದಾರೆ:C.M.

Spread the love

ಅಥಣಿ : ಅಥಣಿ ತಾಲೂಕಿನ ಪೂರ್ವ ಭಾಗದ  ಸು. 12 ಹಳ್ಳಿಗಳ ರೈತರ ಜಮೀನುಗಳಿಗೆ  ನೀರಾವರಿ ಸೌಲಭ್ಯ ಒದಗಿಸಲಾಗುವ  ಅಮ್ಮಾಜೇಶ್ವರಿ  ಕೊಟ್ಟಲಗಿ ಏತ  ನೀರಾವರಿ ಯೋಜನೆಯ ಶಂಕು ಸ್ಥಾಪನೆ ಸಮಾರಂಭಕ್ಕೆ  ಇದೇ  ಮಾರ್ಚ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿದಂತೆ  ಅನೇಕ ಸಚಿವರು ಮತ್ತು ಶಾಸಕರು ಆಗಮಿಸಲಿದ್ದಾರೆ. ಪಕ್ಷದ ಎಲ್ಲಾ ಮುಖಂಡರು  ಮತ್ತು ಕಾರ್ಯಕರ್ತರು  ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.

ಮಾರ್ಚ್ 06 ರಂದು ಅಥಣಿಗೆ ಸಿಎಂ ಸಿದ್ದರಾಮಯ್ಯ ಆಗಮನ

ಅವರು ಗುರುವಾರ ಸಾಯಂಕಾಲ  ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ  ವಿವಿಧ ಗ್ರಾಮಗಳ ರೈತ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಕೊನೆಯ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬುದು  ನನ್ನ ಬಹುದಿನಗಳ ಕನಸಾಗಿತ್ತು. ಈ ನೀರಾವರಿ ಯೋಜನೆಯನ್ನು  ಅನುಷ್ಠಾನಗೊಳಿಸುವ ಮೂಲಕ ರೈತರ ಜಮೀನುಗಳಿಗೆ  ಪೈಪಲೈನ್ ಮೂಲಕ  ನೀರಾವರಿ ಸೌಲಭ್ಯ ಒದಗಿಸಲಾಗುವುದು. 

ನನ್ನ ಪರವಾಗಿ ರೈತರಿಗೆ ಮಾತು ಕೊಟ್ಟು ಮತ ಕೇಳಿದ ನನ್ನ ಎಲ್ಲಾ ಕಾರ್ಯಕರ್ತರ ಮತ್ತು ಮುಖಂಡರ ವಿಶ್ವಾಸ ಉಳಿಸಿಕೊಂಡು ನುಡಿದಂತೆ ನಡೆಯುತ್ತೇನೆ. ತಮಗೆ ಕೊಟ್ಟ ಭರವಸೆಯಂತೆ  ಈ ನೀರಾವರಿ ಯೋಜನೆಯ ಮೂಲಕ  ಈ ಬರದ ನಾಡಿಗೆ  ಹಸಿರು ಸೀರೆ ಉಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಸವದಿ ಹೇಳಿದರು.


Spread the love

About Laxminews 24x7

Check Also

ತಾಯಿಯ ಎದೆ ಹಾಲನ್ನು ಹೆಚ್ಚಿಸಲು ಈ ಗಿಡಮೂಲಿಕೆ ಬಳಸಿ

Spread the loveಭೂಮಿಯ ಮೇಲೆ ಹಲವಾರು ರೀತಿಯ ಔಷಧೀಯ ಗಿಡಗಳಿವೆ. ಇದರಿಂದಾಗಿ ಅವುಗಳನ್ನು ವಿವಿಧ ಔಷಧಿಗಳು ಮತ್ತು ಪರಿಹಾರ ಕ್ರಮಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ