ಬೆಳಗಾವಿಯಲ್ಲೂ ಇದೇ ಸ್ಥಿತಿ: ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ ಆಶ್ರಯವಾಗಿತ್ತು. ಆದರೆ, ನಾಲ್ಕೈದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು, ಹೈದರಾಬಾದ್, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ, ಕೊಲ್ಲಾಪುರ, ಗೋವಾ ರಾಜ್ಯದ ವಾಸ್ಕೋ, ಪಣಜಿ ಸೇರಿ ಇತರ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.
ಈಗಾಗಲೇ ಹಿಂಗಾರು ಹಂಗಾಮಿನ ಜೋಳ, ಕಡಲೆ, ಸೂರ್ಯಕಾಂತಿ ಸುಗ್ಗಿ ಮುಗಿದಿದೆ. ಕಬ್ಬು ಕಟಾವು ಸಹಿತ ಮುಗಿದಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 60 ಕಾರ್ವಿುಕರು ಎರಡು ತಿಂಗಳಿಂದ ನರೇಗಾ ಕೆಲಸಕ್ಕೆ ಬರುತ್ತಿಲ್ಲ. 25 ಕೋಟಿ ರೂ.ಗೂ ಅಧಿಕ ನರೇಗಾ ಬಿಲ್ ಜಮೆ ಆಗಿಲ್ಲ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ನಿತ್ಯ 60 ಬಸ್ಗಳ ಸಂಚಾರ: ಮಂಗಳೂರಿಗೆ ಹೋಗುವ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ 60 ರಿಂದ 75 ಇರುತ್ತದೆ. ಸಂಸ್ಥೆಗೆ ಬರುವ ಆದಾಯ ಒಂದು ಬಸ್ನಿಂದ ಸರಾಸರಿ ಒಂದು ಲಕ್ಷ ರೂ. ವರೆಗೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದಿನ ಮಂಗಳೂರು ಮತ್ತು ಗೋವಾಕ್ಕೆ ಹೋಗಿ ಬರುವ ಕೂಲಿ ಕಾರ್ವಿುಕರ ಸಂಖ್ಯೆ ಅಂದಾಜು 3500 ರಿಂದ 4 ಸಾವಿರ ಇದೆ.
ಇನ್ನು ಗುಳೆ ಹೋದವರು ಹಬ್ಬ, ಹರಿದಿನ, ಜಾತ್ರೆಗೆ ಕಡ್ಡಾಯವಾಗಿ ಊರಿಗೆ ಬರುತ್ತಾರೆ. ವಿಶೇಷವಾಗಿ ಮೊಹರಂ, ದಸರಾ, ದೀಪಾವಳಿ, ಊರ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್ಗಳನ್ನು ಬಿಡಲಾಗುತ್ತಿದೆ.
ಮಂಗಳೂರಿಗೆ ಹೋಗಿ ಬರುವ ಬಸ್ಗಳಲ್ಲಿ ಶೇ. 90ಕ್ಕೂ ಅಧಿಕ ಪ್ರಯಾಣಿಕರು ಕೂಲಿ ಕಾರ್ವಿುಕರು ಇರುತ್ತಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ಆ ಮಾರ್ಗದಲ್ಲಿ ಡ್ಯೂಟಿ ಮಾಡುವ ಚಾಲಕ, ನಿರ್ವಾಹಕರು ಹೇಳುತ್ತಾರೆ.