Breaking News

ಇನ್ಮುಂದೆ ‘ಆರೋಗ್ಯ ಇಲಾಖೆ’ಯ ಖರೀದಿ ಪಕ್ರಿಯೆ ‘ಇ-ಪ್ರೊಕ್ಯೂರ್ಮೆಂಟ್’ ಮೂಲಕ ನಿರ್ವಹಣೆ ಕಡ್ಡಾಯ – ರಾಜ್ಯ ಸರ್ಕಾರ

Spread the love

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧೀನ ಸಂಸ್ಥೆಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ಇ-ಪ್ರೊಕ್ಯೂರ್ಮೆಂಟ್ ಅಥವಾ ಜೆಂ ಪೋರ್ಟಲ್ ಗಳ ಮೂಲಕ ನಿರ್ವಹಣೆ ಮಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧೀನ ಸಂಸ್ಥೆಯ ರೂ.

ಒಂದು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿ ಪ್ರಕ್ರಿಯೆಯನ್ನು e-procurement ಅಥವಾ GeM portal ನ ಆನ್ ಲೈನ್ ಮೂಲಕ ನಡೆಸಲು ಕೆಟಿಪಿಪಿ ಕಾಯ್ದೆ ಮತ್ತು ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ ಎಂದಿದ್ದಾರೆ.

 

e-procurement portal ನಲ್ಲಿ ನೊಂದಾಯಿಸಿಕೊಳ್ಳಲು e-procurement ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ಅಡಕಗೊಳಿಸಬೇಕಾದ ದಸ್ತಾವೇಜುಗಳನ್ನು e-procurement portal ಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ +91-8046010000, +91-8068948777 ಗೆ ಸಂಪರ್ಕಿಸಬಹುದು. DSC (Digital Signature Certificate), encryption and Decryption key states aisland ನಿರ್ದೇಶಕರು, e-procurement, CeG, ಅರವಿಂದ ಭವನಾ, 4ನೇ ಮಹಡಿ, ನೃಪತುಂಗ ವೃತ್ತ, ಬೆಂಗಳೂರು ರವರಿಗೆ Aadhar card, CTC ಸಲ್ಲಿಸಿ Digital Key ಪಡೆಯುವುದು ಎಂದು ತಿಳಿಸಿದೆ.

GeM Portal ನಲ್ಲಿ ಖರೀದಿ ಪ್ರಕ್ರಿಯೆ ನಡೆಸಲು ಸರ್ಕಾರಿ ಇ-ಮೇಲ್ ID ಅಗತ್ಯವಿದ್ದು, ಪ್ರತಿ ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರು/ವೈದ್ಯಕೀಯ ಅಧೀಕ್ಷಕರು/ಜಿಲ್ಲಾ ಶಸ್ತ್ರಚಿಕಿತ್ಸಕರು/ಆಡಳಿತ ವೈದ್ಯರುಗಳ ಜೊತೆಗೆ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಕಛೇರಿ ಅಧೀಕ್ಷಕರುಗಳು ಅಥವಾ ಪ್ರಥಮ ದರ್ಜೆ ಸಹಾಯಕರು ಇವರುಗಳು ಸರ್ಕಾರಿ ಇ-ಮೇಲ್ ID ಸೃಜಿಸಿಕೊಳ್ಳಲು ಸೂಚಿಸಿದೆ. ಸರ್ಕಾರಿ ಇ-ಮೇಲ್ ID ಗಳನ್ನು ಸೃಜಿಸಲು ಪ್ರತಿಯೊಬ್ಬ ಸಿಬ್ಬಂದಿಯು ಹೆಸರು, ಹುದ್ದೆ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕೆ.ಜಿ.ಐ.ಡಿ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಲಾದ format ಅನ್ನು ಭರ್ತಿ ಮಾಡಿ ಶ್ರೀ ಈಶ್ವರ್ ರಾವ್, ಪು.ದ.ಸ, ಸಿ.ಆರ್.ಜಿ ವಿಭಾಗ ಮೊಬೈಲ್ ಸಂಖ್ಯೆ: 9738114774 ರವರಿಗೆ ಸಲ್ಲಿಸಿ ಇ-ಮೇಲ್ ID ಸೃಜಿಸಿಕೊಳ್ಳುವುದು. ಇ-ಮೇಲ್ ID ಸೃಜಿಸಿಕೊಂಡ ನಂತರ GeM portal ನಲ್ಲಿ ನೊಂದಾಯಿಸಿಕೊಳ್ಳುವುದು. ನೊಂದಾಯಿಸಿಕೊಳ್ಳಲು ಶ್ರೀ ಗೌತಮ್ ಮೊಬೈಲ್ ಸಂಖ್ಯೆ: 9379049700 ರವರನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಪ್ರಕಾರ ಆಯಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ನಿಗಧಿಪಡಿಸಲಾಗಿರುವ ಆರ್ಥಿಕ ಮಿತಿಗೆ ಒಳಪಟ್ಟು ಟೆಂಡರ್ ಕರೆಯಬಹುದು ಎಂದು ಹೇಳಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಮಳೆ ಅವಾಂತರ

Spread the love(ಬೆಂಗಳೂರು): ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದ ವೇಳೆ ಮಳೆ ನೀರು ಪಾಯಕ್ಕೆ ನುಗ್ಗಿ ಪಾಯದಲ್ಲಿನ ಮಣ್ಣು ಕುಸಿದು ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ