ಬೆಂಗಳೂರು: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ಚಿತ್ರ ನಟರು, ಮಾಜಿ ಕ್ರೀಡಾ ತಾರೆಯರು ರಾಷ್ಟ್ರೀಯ ಪಕ್ಷಗಳನ್ನು ಸೇರುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.
ಮಹತ್ವದ ಬೆಳವಣಿಗೆ ಒಂದರಲ್ಲಿ ರಾಜಕೀಯದ ಕುರಿತು ಮಾತನಾಡಿರುವ ನಟ ಡಾ. ಶಿವರಾಜ್ಕುಮಾರ್ ನನ್ನ ಪತ್ನಿ ಗೀತಾ ಸಂಸದೆ ಆಗುವ ಮೂಲಕ ಮಹಿಳೆಯರಿಗೆ ಮಾದರಿಯಾಗಲಿ ಎಂದು ಆಶಿಸಿದ್ದಾರೆ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ಬಗ್ಗೆ ಮಾತನಾಡಿದ್ದಾರೆ.ನಾನು ರಾಜಕೀಯಕ್ಕೆ ಬರುವುದಿಲ್ಲ,
ನನಗೆ ಅದರಲ್ಲಿ ಆಸಕ್ತಿ ಇಲ್ಲ. ರಾಜಕೀಯದಲ್ಲಿದ್ದುಕೊಂಡು ಜನರ ಸೇವೆ ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲ, ಯಾರಾದರು ಜನ ಕಷ್ಟ ಅಂತ ಬಂದರೆ ಹಣ ಕೊಟ್ಟು ಕಳಿಸುತ್ತೀನಿ. ಆದರೆ ಗೀತಾ ರಾಜಕೀಯದ ಕುಟುಂಬದಿಂದಲೇ ಬಂದವರು. ರಾಜಕೀಯ ಎಂಬುದು ಅವರಿಗೆ ರಕ್ತದಲ್ಲಿಯೇ ಇದೆ. ಅವರು ಎಂಪಿ ಆಗಿ ಆಯ್ಕೆ ಆದರೆ ಬಹಳ ಸಂತೋಷ. ಇದರಿಂದ ಅನೇಕರಿಗೆ ಸ್ಫೂರ್ತಿ ಸಿಗುತ್ತದೆ.