ಬೆಂಗಳೂರು, : ಅಪರಿಚಿತ ಮಹಿಳೆಯ ಮುಖ ಜಜ್ಜಿ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿ (Vaddarahalli) ಗ್ರಾಮದ ಬಳಿ ನಡೆದಿದೆ. ನರಸಿಂಹಮೂರ್ತಿ ಎಂಬುವರ ಜಮೀನಿನಲ್ಲಿ ಅಂದಾಜು 35 ವರ್ಷದ ಮಹಿಳೆಯನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆನೆಲಮಂಗಲಎಎಸ್‌ಪಿ ಪುರುಷೋತ್ತಮ್ ಹಾಗೂ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ, ಸೋಕೋ ಟೀಮ್ ಹಾಗೂ ಡಾಗ್ ಸ್ಕೋರ್ಡ್ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುಟ್ಟ ಸ್ಥಿತಿಯಲ್ಲಿ ಯುವಕ ಶವವಾಗಿ ಪತ್ತೆ
ರಾಯಚೂರು: ಬೆಂಕಿ ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಯುವಕ ಶವವಾಗಿ ಪತ್ತೆಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಿಟ್ಟಿ ಕ್ಯಾಂಪ್ ಗ್ರಾಮದ ಹೊಲದಲ್ಲಿ ಪತ್ತೆಯಾಗಿದೆ. ಸುರೇಶ್ ನಾಯಕ್ (20) ಶವವಾಗಿ ಪತ್ತೆಯಾಗಿರುವ ಯುವಕ.
ಮೂರು ದಿನಗಳ ಹಿಂದೆಯೇ ಮನೆಯಿಂದ ಸ್ನೇಹಿತರ ಜೊತೆ ತೆರಳಿದ್ದ ಸುರೇಶ್, ಸ್ನೇಹಿತರ ಜೊತೆ ಪಾರ್ಟಿ ಮಾಡುವುದಾಹಿ ಹೇಳಿ ಹೋಗಿದ್ದ. ಬಳಿಕ ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಇದೀಗ ಮೂರು ದಿನಗಳ ಬಳಿಕ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.