ತುಮಕೂರು, ಫೆಬ್ರವರಿ 29: ಜಾತಿಗಣತಿ ವರದಿ ಸಲ್ಲಿಕೆಗೆ ತೀವ್ರ ವಿರೋಧವ್ಯಕ್ತವಾಗಿತ್ತು. ಅವೈಜ್ಞಾನಿಕ ವರದಿ ಎಂದು ಒಕ್ಕಲಿಗ, ವೀರಶೈವಲಿಂಗಾತ ಸಮುದಾಯ ವಿರೋಧ ಮಾಡಿತ್ತು. ಇದೀಗ ವಿರೋಧದ ನಡುವೆಯೇ ಜಾತಿಗಣತಿ ವರದಿ ಸಿಎಂ ಸಿದ್ದರಾಮಯ್ಯ ಕೈಸೇರಿದೆ.
ಸದ್ಯ ಈ ವಿಚಾರವಾಗಿ ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ(Siddaganga Shree)ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತೆ. ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರ್ತಿದೆ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ ಎಂದು ಹೇಳಿದ್ದಾರೆ.
ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತೆ. ನಾನ್ಯಾವ ಜಾತಿ, ಏನು ಅಂತಾ ಯಾರೂ, ಯಾವ ಮಾಹಿತಿಯೂ ಕೇಳಿಲ್ಲ. ಎಲ್ಲರ ಬಳಿಯೂ ಹೋಗಿದ್ವಿ ಅಂತಾ ಹೇಳ್ತಾರಲ್ವಾ? ನನ್ನ ಬಳಿಯೇ ಬಂದಿಲ್ಲ. ಆ ಮೂಲಕ ಪರೋಕ್ಷವಾಗಿ ವರದಿ ವೈಜ್ಞಾನಿಕವಾಗಿ ಆಗಿಲ್ಲ ಎಂದಿದ್ದಾರೆ.