ಗದಗ, ಫೆ.29: ಜಿಲ್ಲೆಯ ಪ್ರತಿಷ್ಟಿತ ಶಿವಾನಂದ ಮಠದ ಉಭಯ ಶ್ರೀಗಳ ಪೀಠ ಗಲಾಟೆ (Shivananda Mutt succession controversy) ಮತ್ತೆ ಜೋರಾಗಿದೆ. ಕಳೆದ ವರ್ಷದಿಂದಉಭಯ ಶ್ರೀಗಳನಡುವಿನ ಗುದ್ದಾಟ ಬಲು ಜೋರಾಗಿದೆ. ವರ್ಷಗಳು ಕಳೆದರೂ ಇನ್ನೂ ವೈಮನಸ್ಸು ದೂರವಾಗಿಲ್ಲ. ಇನ್ನು ಮಾರ್ಚ್ 8, ಶಿವರಾತ್ರಿ ದಿನದಂದು ಶಿವಾನಂದ ಮಠದ ಜಾತ್ರಾಮಹೋತ್ಸವ ನಡೆಯಲಿದೆ. ಕಿರಿಯ ಶ್ರೀಗಳನ್ನು ಹೊರಗಿಟ್ಟು ಹಿರಿಯ ಶ್ರೀಗಳು ಜಾತ್ರಾಮಹೋತ್ಸವ ನಡೆಸಲು ಸಜ್ಜಾಗಿದ್ದಾರೆ. ಇದು ಕಿರಿಯ ಶ್ರೀಗಳು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಮಾತನಾಡಿ. ‘ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳು ಮಠದ ಪರಂಪರೆಯಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಉತ್ತರಾಧಿಕಾರಿ ಪೀಠದಿಂದ ತೆಗೆಯಲಾಗಿದೆ ಎಂದು ಹೇಳಿದರು. ಇನ್ನು ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಈ ಕಿರಿಯ ಶ್ರೀಗಳ ಹಕ್ಕುಗಳ ದಕ್ಕೆಯಾಗದಂತೆ ಮಠದ ಆಡಳಿತ ನಡೆಯಬೇಕು ಎಂದು ಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಹೀಗಾಗಿ ಜಾತ್ರಾಮಹೋತ್ಸವವನ್ನ ಕಿರಿಯ ಶ್ರೀಗಳ ಜೊತೆಗೆ ಮಾಡಬೇಕು ಎಂದು ಶ್ರೀಗಳ ಪರ ಭಕ್ತರು, ಹಿರಿಯ ಶ್ರೀಗಳಿಗೆ ಮನವಿ ಮಾಡಿದ್ಧಾರೆ. ಆದ್ರೆ, ಹಿರಿಯ ಶ್ರೀಗಳು ಮಾತ್ರ ಭಕ್ತರ ಮನವಿಗೆ ಬಗ್ಗುತ್ತಿಲ್ಲ. ಇದು ಭಕ್ತರು ಹಾಗೂ ಕಿರಿಯ ಶ್ರೀಗಳನ್ನು ಕೆರಳುವಂತೆ ಮಾಡಿದೆ.