ಕಾರವಾರ : ರಾಜ್ಯಸಭಾ ಚುನಾವಣೆಯಲ್ಲಿ(Rajyasabha election) ಮತದಾನ ಮಾಡದೇ ದೂರ ಉಳಿದಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್(Shivaram Hebbar) ಕೊನೆಗೂ ಮೌನ ಮುರಿದಿದ್ದು , ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಸ್ವಪಕ್ಷದವರ ಬಗ್ಗೆ ಅಸಮಾಧಾನವಿದೆ ಎಂಬುದನ್ನೂ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಇಂದು (ಫೆ.28) ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು ಆರೋಗ್ಯ ಸರಿಯಿಲ್ಲದ ಕಾರಣ ವೈದ್ಯರ ಸಲಹೆ ಮೇರೆಗೆ ಮತದಾನ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಬೇಸರವಿದೆ ಯಾರಿಗೂ ಹೆದರಿ ಮತದಾನ ತಪ್ಪಿಸುವ ಅವಶ್ಯಕತೆ ಇಲ್ಲ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಇನ್ನು ಪಕ್ಷದಲ್ಲಿ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಸ್ವಪಕ್ಷದ ಮೇಲೆ ಅಸಮಾಧಾವಿದೆ, ಸ್ಥಳೀಯ ಕೆಲ ಬಿಜೆಪಿ ನಾಯಕರು ನನ್ನನ್ನು ಸೋಲಿಸಲು ಯತ್ನಿಸಿದ್ದರು ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ ಆದರೆ ಕ್ರಮ ಕೈಗೊಂಡಿಲ್ಲ ಎಂದರು.