ಶಿವಮೊಗ್ಗ : ದೇಶದ್ರೋಹಿಗಳನ್ನು(Anti nationals) ಬಂಧಿಸಲು ಯೋಚನೆ ಮಾಡಬೇಕಾ? ಸರ್ಕಾರ ಯಾಕಷ್ಟು ತಡ ಮಾಡುತ್ತಿದೆ? ಎಂದು ಪಾಕ್ ಪರ ಘೋಷಣೆ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಪಾಕ್ ಪರ ಘೋಷಣೆ ಕೂಗಿದ್ದ ಜಾಗದಲ್ಲೇ ಅರನ್ನು ಬಂಧಿಸಬೇಕಿತ್ತು , ಆದರೆ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ, ಕಾಂಗ್ರೆಸ್ ದೇಶದ್ರೋಹಿಗಳನ್ನು ರಕ್ಷಿಸುವ 6ನೇ ಗ್ಯಾರೆಂಟಿ ಘೋಷಿಸಿದ್ದಾರೆ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.
ಇನ್ನು ಮಂಗಳೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಯಿಸಿದ ಅವರು ಪ್ರಕಾಶ್ ರೈ ಒಬ್ಬ ಅಯೋಗ್ಯ ಅಯೋಗ್ಯರ ಮಾತಿಗೆ ಉತ್ತರ ನೀಡಬೇಕಾಗಿಲ್ಲ ದೇಶದ ಜನ ಮೋದಿ ಅವರನ್ನು ಪ್ರಧಾನಿ ಎಂದು ಒಪ್ಪಿಕೊಂಡಿದ್ದಾರ ಎಂದರು. ರಾಜ್ಯಸಭೆಗೆ 5ನೇ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಕಾರಣ ಇದೆ ಮುಮದೆ ಗೊತ್ತಾಗುತ್ತೆ ಎಂದರು.