Breaking News

ಹಸೆಮಣೆ ಮೇಲೆ ಬಿಗ್​ಬಾಸ್ ಜೋಡಿ ನಮ್ರತಾ-ಕಾರ್ತಿಕ್

Spread the love

ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಅವರುಗಳು ಹಸೆ ಮಣೆ ಏರಿದ್ದಾರೆ! ಇಲ್ಲಿವೆ ನೋಡಿ ಚಿತ್ರಗಳು.ಬಿಗ್​ಬಾಸ್​ನಲ್ಲಿ (BiggBoss) ಪ್ರೀತಿ-ಪ್ರೇಮ, ಸ್ನೇಹ, ಸರಸ-ವಿರಸಗಳು ಸಾಮಾನ್ಯ. ಕೆಲವು ಜೋಡಿಗಳಂತೂ ಬಿಗ್​ಬಾಸ್​ ಮನೆಗೆ ಹೋಗಿ ಪ್ರೇಮಿಗಳಾಗಿ ಹೊರಬಂದಿದ್ದಿದೆ.

ಹಸೆಮಣೆ ಮೇಲೆ ಬಿಗ್​ಬಾಸ್ ಜೋಡಿ ನಮ್ರತಾ-ಕಾರ್ತಿಕ್

ಈ ಬಾರಿ ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಕೆಲವು ಸ್ಪರ್ಧಿಗಳ ನಡುವೆ ಆತ್ಮೀಯತೆ ತುಸು ಹೆಚ್ಚೇ ಇತ್ತು. ಅದರಲ್ಲಿಯೂ ಕಾರ್ತಿಕ್ ಹಾಗೂ ನಮ್ರತಾ ಬಿಗ್​ಬಾಸ್​ನ ಕೊನೆಯ ಕೆಲ ವಾರಗಳಲ್ಲಿ ತುಸು ಹೆಚ್ಚೇ ಹತ್ತಿರವಾಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯಕ್ಕೆ ನಮ್ರತಾರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಕಾರಣಕ್ಕೆ ನಮ್ರತಾ ಹಾಗೂ ಕಾರ್ತಿಕ್ ಪರಸ್ಪರ ದೂರಾದರು.

ಆದರೆ ಹೊರಗೆ ಬಂದ ಮೇಲೆ ಈಗ ಅಚಾನಕ್ಕಾಗಿ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಹಸೆಮಣೆ ಏರಿದ್ದಾರೆ! ಇಬ್ಬರೂ ಮದುವೆ ಆಗಿಬಿಟ್ಟರೆ ಎಂದು ಶಾಕ್ ಆಗುವಂತಿಲ್ಲ. ಇಬ್ಬರೂ ಹಸೆಮಣೆ ಏರಿರುವುದು ಜಾಹೀರಾತೊಂದರ ಚಿತ್ರೀಕರಣಕ್ಕಾಗಿ. ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಅವರುಗಳು ಚಿನ್ನಾಭರಣದ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.


Spread the love

About Laxminews 24x7

Check Also

ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Spread the love ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ