ಅಮರಾವತಿ: ಆಂಧ್ರ ಪ್ರದೇಶದ (Andhra Pradesh) ರಾಜಕೀಯ ಯಾವಾಗಲೂ ಹಾಟ್ ಆಗಿರುತ್ತೆ, ಈಗ ಲೋಕಸಭಾ (Lok Sabha Election) ಮತ್ತು ವಿಧಾನಸಭಾ ಚುನಾವಣೆಗಳು (Assembly Election) ಏಕಕಾಲದಲ್ಲಿ ನಡೆಯುವುದರಿಂದ ರಾಜಕೀಯ ಮತ್ತಷ್ಟು ಹಾಟ್ ಆಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ (Social Media) ಮಹಿಳೆಯವರು ನಾಚಿಕೆಯಿಂದ ಸಾಮಾಜಿಕ ಜಾಲತಾಣ ಬಳಕೆಯನ್ನೇ ಕಡಿಮೆ ಮಾಡುವ ಮಟ್ಟಕ್ಕೆ ಇಳಿದಿದೆ.
ಕಂಡೋಮ್ ಪ್ಯಾಕೇಟ್ಗಳನ್ನು ಬಿಡದೆ ಆಂಧ್ರ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಕುರಿತ ಕೆಲ ಫೋಟೋಗಳು (Photo) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಜಕೀಯ ಪಕ್ಷಗಳ ಪ್ರಚಾರಗಳ ಗಿಮಿಕ್ಗಳು ಜನಸಾಮಾನ್ಯರಿಗೆ ಬೇಸರ ತರಿಸುತ್ತಿವೆ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡ್ತಿದ್ದಾರೆ.
ಟಿಡಿಪಿ ವಸರ್ಸ್ ವೈಎಸ್ಆರ್ಸಿಪಿ
ಅದರಲ್ಲಿ ಆಡಳಿತರೂಢ ಪಕ್ಷ ವೈಎಸ್ಆರ್ಸಿಪಿ ಪಕ್ಷ ಹಾಗೂ ಟಿಡಿಪಿ ಪಕ್ಷಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಜೋರಾಗಿದೆ. ವೈಎಸ್ಆರ್ಸಿಪಿ ಪಕ್ಷದ ಚಿಹ್ನೆ ಹೊಂದಿರುವ ಕಂಡೋಮ್ ಪ್ಯಾಕೇಟ್ಅನ್ನು ಟಿಡಿಪಿ ಪಕ್ಷದ ಕಾರ್ಯಕರ್ತರು ಶೇರ್ ಮಾಡಿದರೆ, ಟಿಡಿಪಿ ಪಕ್ಷದ ಚಿಹ್ನೆಯನ್ನು ಹೊಂದಿರುವ ಕಂಡೋಮ್ ಪ್ಯಾಕೇಟ್ ಅನ್ನು ಎದುರಾಳಿ ಪಕ್ಷದ ಕಾರ್ಯಕರ್ತರು ಶೇರ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.