ಉತ್ತರಕನ್ನಡ : ಬೈಕ್ ಓವರ್ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದ ಘಟನೆಯಾಗಿದೆ.
ಪ್ರಜ್ವಲ್ ಪ್ರಕಾಶ್ ಕಕ್ಕೇರಿಕರ ಎನ್ನುವ ಯುವಕನ ಮೇಲೆ 6 ಜನರು ಹಲ್ಲೆ ಮಾಡಿದ್ದಾರೆ. ಈ ವೇಳೆ ಹಲ್ಲೆಗೆ ಒಳಗಾದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.ಮೃತ ಯುವಕನನ್ನು ಹಳಿಯಾಳ ಮೂಲದವನೆಂದು ಹೇಳಲಾಗುತ್ತಿದೆ.
ಶರಣ್ ಮರಾಠಿ, ಅನಿಕೇತ್ ಪಾಟೀಲ್, ಪಾಂಡುರಂಗ ಕಳಸೂರಕರ, ಪ್ರಶಾಂತ್, ರೂಪೇಶ್ ಎನ್ನುವ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧಇದೀಗ FIR ದಾಖಲಾಗಿದೆ.