ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದರು.
ಗೋವಾದಿಂದ ರಣಕುಂಡಿ ಕ್ರಾಸ್ ವರೆಗಿನ ಈ ರಸ್ತೆ 43.ಕಿ.ಮೀಟರ್ ಉದ್ದವಾಗಿದ್ದು, 58.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಣೆ ಕಾರ್ಯ ಕೈಗೊಳ್ಳುತ್ತಿದ್ದು, 11 ತಿಂಗಳ ಅವಧಿಯಲ್ಲೇ ರಸ್ತೆ ದುರಸ್ತಿ ಕಾರ್ಯ ಮುಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.