Breaking News

ದೆಹಲಿಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯಲಿದೆ ಆಪ್, ಕಾಂಗ್ರೆಸ್

Spread the love

ಹೊಸದಿಲ್ಲಿ: ಇಂಡಿಯಾ ಒಕ್ಕೂಟದ (INDIA bloc) ಆಮ್ ಆದ್ಮಿ ಪಕ್ಷ (AAP) ಮತ್ತು ಕಾಂಗ್ರೆಸ್ (congress) ನಡುವೆ ದೆಹಲಿಯ (delhi) ಲೋಕಸಭಾ (loksabha) ಸ್ಥಾನಗಳ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಲಾಗಿದೆ.

ಆಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಈ ಬಗ್ಗೆ ಎರಡೂ ಪಕ್ಷಗಳು ಜಂಟಿಯಾಗಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿವೆ.

ಎಎಪಿ ಅಭ್ಯರ್ಥಿಗಳು ಹೊಸದಿಲ್ಲಿ (New Delhi), ದಕ್ಷಿಣ ದೆಹಲಿ (South Delhi), ಪಶ್ಚಿಮ ದೆಹಲಿ (West Delhi) ಮತ್ತು ಪೂರ್ವ ದೆಹಲಿಯಲ್ಲಿ (East Delhi) ಸ್ಪರ್ಧಿಸಲಿದ್ದು, ಚಾಂದಿನಿ ಚೌಕ್ (Chandni Chowk), ಈಶಾನ್ಯ ದೆಹಲಿ (North East Delhi) ಮತ್ತು ವಾಯುವ್ಯ ದೆಹಲಿಯಲ್ಲಿ (North West Delhi) ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.

LOKSABHA ELECTION-2024: ದೆಹಲಿಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯಲಿದೆ ಆಪ್, ಕಾಂಗ್ರೆಸ್

ಈ ಹಿಂದೆ ಆಪ್ ಏಳು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಮಾತ್ರ ಕಾಂಗ್ರೆಸ್‌ಗೆ ನೀಡಿದ್ದರಿಂದ ಎರಡೂ ಪಕ್ಷಗಳ ನಡುವೆ ವೈಮನಸ್ಯ ಉಂಟಾಗಿತ್ತು.

2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಮತಗಳಿಸಿ ಬಿಜೆಪಿ (BJP) ರಾಷ್ಟ್ರ ರಾಜಧಾನಿಯ ಎಲ್ಲಾ ಏಳು ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು.

ಹರಿಯಾಣದಲ್ಲಿ (Haryana) ಆಪ್ ಗೆ ಒಂದು ಮತ್ತು ಗುಜರಾತ್‌ನಲ್ಲಿ (Gujarat) ಎರಡು ಸ್ಥಾನಗಳನ್ನು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಹರಿಯಾಣ ಕ್ಷೇತ್ರವು ಗುರುಗ್ರಾಮ್ ಅಥವಾ ಫರಿದಾಬಾದ್ ಹಾಗೂ ಗುಜರಾತ್‌ನಲ್ಲಿ ಭರೂಚ್ ಮತ್ತು ಭಾವನಗರವನ್ನು ಆಪ್ ಗೆ ನೀಡುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫಯಾಜ್ ಅಹ್ಮದ್‌ ಶೇಖ್ ಲೋಕಾಯುಕ್ತ ಬಲೆಗೆ

Spread the loveಬೆಳಗಾವಿ : ಜಪ್ತಿಯಾಗಿದ್ದ ಮರಳನ್ನು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ