ರಬಕವಿ ಬನಹಟ್ಟಿ: ಇಲ್ಲಿನ ಹಳೆಯ ನೀರಿನ ಟ್ಯಾಂಕ್ ಹತ್ತಿರದ ಬನಶಂಕರಿ ದೇವಸ್ಥಾನದ ಜಾತ್ರೆಯ ಅಂಗವಾಗಿ ಶುಕ್ರವಾರ ದೇವಿಗೆ ವಿಶೇಷವಾದ ತರಕಾರಿ ಪೂಜೆಯನ್ನು ಸಲ್ಲಿಸಲಾಯಿತು.
ಒಟ್ಟು 60ಕ್ಕೂ ಹೆಚ್ಚು ವಿವಿಧ ರೀತಿಯ ತರಕಾರಿಗಳನ್ನು ತಂದು ದೇವಿಗೆ ಪೂಜೆಯನ್ನು ಸಲ್ಲಿಸಲಾಯಿತು.
ಮಧ್ಯ ರಾತ್ರಿ 12ಕ್ಕೆ ಆರಂಭಗೊಂಡ ತರಕಾರಿ ಅಲಂಕಾರ ಬೆಳಗಿನ ಜಾವದವರೆಗೆ ನಡೆಯಿತು.
ಜಾತ್ರೆಯ ಅಂಗವಾಗಿ ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ, ಸಕಲವಾಧ್ಯ ಮೇಳದೊಂದಿಗೆ ಶ್ರೀ ಬನಶಕರಿದೇವಿ ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿ ತುಂಬುವುದು, ತೊಟ್ಟಿಲೋತ್ಸವ ಮತ್ತು ಮಧ್ಯಾಹ್ನ ಪ್ರಸಾದದ ನಂತರ ಸಂಜೆ 8 ಕ್ಕೆ ಬನಶಂಕರ ದೇವಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶ್ರೀಶೈಲ ಗೊಂಬಿ ತಿಳಿಸಿದ್ದಾರೆ.
ವಿಜಯ ಲುಕಡೆ, ಬಸವರಾಜ ನುಚ್ಚಿ, ಈರಣ್ಣ ಮನವಾಡೆ, ರಾಜು ಶೀಲವಂತ, ವಿನಾಯಕ ಬೇವಿನಗಿಡದ, ಶ್ರೀಧರ ಕರೋಳಿ, ಮಹಾಂತೇಶ ಕೊಕಟನೂರ, ಶಿವಾನಂದ ಜವಳಗಿ, ಪ್ರಭು ಸಜ್ಜಿ ಸೇರಿದಂತೆ ಅನೇಕರು ಇದ್ದರು.