ಹಾವೇರಿ: ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ, ದಲಿತ ಯೋಜನೆಗಳ ಮಾಲೀಕ ನೀನಲ್ಲ ಎಂಬ ಫಲಕವನ್ನು ಹಿಡಿದು ಬಿಜೆಪಿ ಕಾರ್ಯಕರ್ತರು (BJP Protest) ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಹಾವೇರಿ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡಿ ರಾಜ್ಯ ಸರ್ಕಾರದ (Government Of Karnataka) ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಪೂಜಾರ್ ನೇತೃತ್ವದಲ್ಲಿ ಮಾಜಿ ಶಾಸಕರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ರಾಜ್ಯ ಸರ್ಕಾರವು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಏನಿಲ್ಲಾ ಏನಿಲ್ಲಾ ಸಿದ್ದರಾಮಯ್ಯ, ದಲಿತ ಯೋಜನೆಗಳ ಮಾಲೀಕ ನೀನಲ್ಲಾ, ದಲಿತ ಸಮುದಾಯ (Dalit Community) ತುಳಿಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣಾ ಫಲಕಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.