Breaking News

ಜನಾರ್ದನ ರೆಡ್ಡಿ ಬೆಂಬಲ ನಮಗೆ ಇದೆ: ಡಿಕೆಶಿ

Spread the love

ಬೆಂಗಳೂರು: ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಸೇರಿದಂತೆ ನಮ್ಮ 138 ಶಾಸಕರು ಒಂದಾಗಿದ್ದಾರೆ, ನಮ್ಮ ಮನೆಯನ್ನು ಭದ್ರವಾಗಿಟ್ಟುಕೊಳ್ಳುವುದು ಹೇಗೆ ಅಂತ ಗೊತ್ತು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿರೋಧ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆನ್ನುವುದರ ಮೇಲೂ ನಿಗಾ ಇಡಲಾಗಿದೆ. ಜನರ್ದನ ರೆಡ್ಡಿ ಬೆಂಬಲ ನಮಗಿದೆ ಎಂದು ಹೇಳಿದರು.

DK SHIVAKUMAR: ಜನಾರ್ದನ ರೆಡ್ಡಿ ಬೆಂಬಲ ನಮಗೆ ಇದೆ: ಡಿಕೆಶಿ

ಬಿಜೆಪಿಯವರು ಏನೇನು ಚರ್ಚೆ ಮಾಡಿದ್ದಾರೆ, ಯಾವ್ಯಾವ ಶಾಸಕರಿಗೆ ಕರೆಮಾಡಿದ್ದಾರೆ ಎನ್ನುವುದರ ಕುರಿತು ನಮಗೆ ಅರಿವಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತು. ಅದೇ ರೀತಿ ನಮ್ಮ ಬತ್ತಳಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ತಿಳಿದಿದೆ ಎಂದರು.

ನಾವು ನಮ್ಮ ಶಾಸಕರಿಗೆ ಶಾಸಕಾಂಗ ಸಭೆಯನ್ನು ಕರೆದಿದ್ದೇವೆ ಅಲ್ಲಿ ಮಾಕ್‌ ವೋಟಿಂಗ್‌ ಇರುತ್ತದೆ. ಬೇರೆಯವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ನಾವು ನಮ್ಮ ಮನೆಯನ್ನು ಹೇಗೆ ಭದ್ರಪಡಿಸಿಕೊಳ್ಳಬೇಕೆನ್ನುವುದು ನಮಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.


Spread the love

About Laxminews 24x7

Check Also

ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ

Spread the love ಗಣಪತಿ ಹಬ್ಬದ ಆಗಮನ — ಗ್ರಾಮೀಣ ಭಾಗದಲ್ಲಿ ಭಕ್ತಿ, ಸಂಭ್ರಮ, ಸಾಂಸ್ಕೃತಿಕ ಚೈತನ್ಯ ಸಾವಳಗಿ ರಾಜ್ಯದಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ